Home » Death News: ತಿಂದದ್ದು ಮೈಕ್ರೋವೇವ್ ನಲ್ಲಿ ಬೇಯಿಸಿದ ಬಿಸಿ ತಿಂಡಿ- ಕಂಡದ್ದು ಮಾತ್ರ ಸಾವು !! ಅರೆ ಇದೇನಿದು ವಿಚಿತ್ರ ?

Death News: ತಿಂದದ್ದು ಮೈಕ್ರೋವೇವ್ ನಲ್ಲಿ ಬೇಯಿಸಿದ ಬಿಸಿ ತಿಂಡಿ- ಕಂಡದ್ದು ಮಾತ್ರ ಸಾವು !! ಅರೆ ಇದೇನಿದು ವಿಚಿತ್ರ ?

1 comment
Death News

Death News:ಇತ್ತೀಚೆಗೆ ಆಹಾರದಲ್ಲಿ ಕಲಬೆರಕೆ ಆಗಿ ದೇಹಕ್ಕೆ ವಿಷವಾಗಿ ಪರಿಣಮಿಸಿ ಎಷ್ಟೋ ಜೀವಗಳು ಹೋಗಿರುವ ಘಟನೆ (Death News) ಕೇಳಿದ್ದೇವೆ ಮತ್ತು ನೋಡಿದ್ದೇವೆ. ಇದೀಗ ಇದಕ್ಕೆ ನಿದರ್ಶನ ಎಂಬಂತೆ ಬಾಳಿ ಬದುಕಬೇಕಾದ ಒಂದು ಜೀವ ಮೌನವಾಗಿ ಸ್ಮಶಾನ ಸೇರಿದೆ.

ಹೌದು, ನೀವು ಪಾಸ್ತಾ ಬಗ್ಗೆ ಕೇಳಿರಬಹುದು, ಹಸಿವಾದಾಗ ಬೇಗನೆ ತಯಾರು ಮಾಡಿ ತಿನ್ನಬಹುದಾದ ಈ ಆಹಾರ ತುಂಬಾ ರುಚಿಯಾಗಿರುತ್ತೆ. ಮುಖ್ಯವಾಗಿ ವಿದೇಶದಲ್ಲಿ ಇದರ ಬಳಕೆ ಹೆಚ್ಚಾಗಿದೆ. ಅಂತೆಯೇ ಎಜೆ ಎಂಬ 20 ವರ್ಷದ ಬ್ರಸೆಲ್ಸ್ ಎಂಬ ಯುವಕ ಅಡುಗೆಮನೆಯಲ್ಲಿ ಉಳಿದಿರುವ ಸ್ಪಾಗೆಟ್ಟಿ ಮತ್ತು ಟೊಮೆಟೊ ಸಾಸ್‌ನ ನ್ನು ಬಿಸಿ ಮಾಡಿ ಸೇವಿಸಿದ ನಂತರ ಸಾವನ್ನಪ್ಪಿದ್ದಾನೆ.

ಹೆತ್ತವರ ಮಾಹಿತಿ ಪ್ರಕಾರ, ಯುವಕ ಐದು ದಿನಗಳ ಹಿಂದೆ ಪಾಸ್ತಾವನ್ನು ತಯಾರಿಸಿ ಅಡುಗೆಮನೆಯಲ್ಲಿ ಇಟ್ಟಿದ್ದು, ಶಾಲೆ ಮುಗಿದ ನಂತರ, ಅವನು ಅದನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ ತಿಂದಿದ್ದಾನೆ. ಇದಾದ ಬಳಿಕ ಅವನಿಗೆ ವಾಕರಿಕೆ, ಹೊಟ್ಟೆ ನೋವು ಮತ್ತು ತಲೆನೋವು ಅನುಭವಿಸಲು ಪ್ರಾರಂಭವಾಯಿತು. ಬೆಳಿಗ್ಗೆ 11 ಗಂಟೆಗೆ ಅವನನ್ನು ಪರೀಕ್ಷಿಸಿದಾಗ ಮಾತ್ರ ತಮ್ಮ ಮಗ ಸತ್ತಿದ್ದಾನೆ ಎಂದು ತಿಳಿದುಬಂದಿದೆ.

ಮುಂಜಾನೆ 4 ಗಂಟೆ ಸುಮಾರಿಗೆ ಪಾಸ್ಟಾ ತಿಂದ 10 ಗಂಟೆಗಳ ನಂತರ ಯುವಕ ಮೃತಪಟ್ಟಿದ್ದಾನೆ ಎಂದು ಶವಪರೀಕ್ಷೆಯಲ್ಲಿ ತಿಳಿದುಬಂದಿದೆ. ವೈದ್ಯರು ನೀಡಿದ ಮಾಹಿತಿ ಪ್ರಕಾರ, ಇದು ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಆಹಾರ ವಿಷದ ಅಂಶದಿಂದ ಮೃತಪಟ್ಟಿರುವುದು ಎಂದು ತಿಳಿದು ಬಂದಿದೆ.

ಅಲ್ಲದೇ ಬ್ಯಾಸಿಲಸ್ ಸೆರಿಯಸ್ ಯಕೃತ್ತಿನ ವೈಫಲ್ಯವನ್ನು ಉಂಟುಮಾಡಬಹುದು, ಪಿಷ್ಟದ ಆಹಾರಗಳಲ್ಲಿನ ವಿಷಕಾರಿ ಅಂಶವು ಶಾಖದ ಪರಿಣಾಮಗಳನ್ನು ಪ್ರತಿರೋಧಿಸುತ್ತದೆ ಮತ್ತು ಅಡುಗೆ ಅಥವಾ ಮತ್ತೆ ಬಿಸಿ ಮಾಡಿದ ನಂತರವೂ ಮುಂದುವರಿಯುವ ಕಾರಣ ಯುವಕನ ಮರಣವಾಗಿದೆ.

ಇದನ್ನೂ ಓದಿ: ಮಹಿಳಾ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ – ಇನ್ಮುಂದೆ ಫ್ರೀಯಾಗಿ ಓಡಾಡಲು ಆಧಾರ್ ಕಾರ್ಡ್ ಬೇಕಿಲ್ಲ!

You may also like

Leave a Comment