Home » Dharwad: ಕುಳ್ಳಿ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ!

Dharwad: ಕುಳ್ಳಿ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ!

1 comment
Dharwad

ಧಾರವಾಡ: ಒಬ್ಬೊಬ್ಬರ ಮನಸ್ಥಿತಿ ಒಂದೊಂದು ತರ ಇರುತ್ತದೆ. ಆದರೆ ಎಂತಹ ಪರಿಸ್ಥಿತಿ ಬಂದರೂ ಕೂಡ ಮನ ಕುಗ್ಗದೇ ಧೈರ್ಯಶಾಲಿಗಳಾಗಿರಬೇಕು ಅಷ್ಟೇ. ಲವ್​ ಬ್ರೇಕಪ್​, ಪರೀಕ್ಷೆಯಲ್ಲಿ ಫೇಲ್​ ಆದ್ರೆ, ಪೇರೆಂಟ್ಸ್​ ಬೈದ್ರೆ ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಉದಾಹರಣೆಗಳಿವೆ. ಆದರೆ, ಇದಕ್ಲಕೆ ಸುಸೈಡ್​ ಒಂದೇ ಪರಿಹಾರಲ್ಲ. ಇದೀಗ ಇಂತಹದ್ದೇ ಒಂದು ಪ್ರಕರಣಕ್ಕೆ ಇಲ್ಲೊಂದು ಕೇಸ್​ ಸಾಕ್ಷಿಯಾಗಿದೆ.

ಕುಳ್ಳಿ ಎಂದು ಮಾನಸಿಕವಾಗಿ ನೊಂದಿದ್ದ ಯುವತಿಯೊಬ್ಬಳ್ಳು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಜಯನಗರದ ಬಳಿ ನಡೆದಿದೆ. ಎಸ್​, ಧಾರವಾಡ ಜಯ ನಗರದ ನಿವಾಸಿಯಾಗಿದ್ದ ದೀಪಾ ಪಾಟೀಲ್ (27) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ.‌ ಇನ್ನೂ ದೀಪಾ ಹುಟ್ಟು ಕುಳ್ಳಿಯಾಗಿದ್ದು, ಎಲ್ಲರಂತೆ ನಾನು ಇಲ್ಲ ಎಂದು ನೊಂದಿದ್ದಳು ಎಂದು ಹೇಳಲಾಗುತ್ತಿದೆ. ಇದೆ ಕಾರಣಕ್ಕೆ ಸಂಜೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಶಂಕಿಸಲಾಗಿದೆ.

ಇನ್ನೂ ಘಟನೆಯ ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಲೆ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಯೊಂದಿಗೆ ಸೇರಿ ಯುವತಿಯ ಮೃತದೇಹ ಹೊರ ತೆಗೆದಿದ್ದಾರೆ. ಸದ್ಯ ಈಗ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ತನಿಖೆಯ‌ ನಂತರ ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಾಗಿದೆ.

ಇದನ್ನು ಓದಿ: Snake Bite: ಹೆಂಡ್ತಿ, ಮಗುವನ್ನು ಸಾಯಿಸಲು ಗಂಡನ ಖತರ್ನಾಕ್‌ ಪ್ಲ್ಯಾನ್‌!! ಹಾವು ತಂದು ಕೋಣೆಗೆ ಬಿಟ್ಟ, ಮುಂದಾದದ್ದೇನು?

You may also like

Leave a Comment