Home » Death News: ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ; ತುಳು ಲಿಪಿಯ ಪಂಚಾಂಗ ಕರ್ತೃ, ಶತಾಯುಷಿ ವಿದ್ವಾನ್ ಅಂಗಡಿ ಮಾರು ಕೃಷ್ಣಭಟ್ಟರು ಅಸ್ತಂಗತ

Death News: ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ; ತುಳು ಲಿಪಿಯ ಪಂಚಾಂಗ ಕರ್ತೃ, ಶತಾಯುಷಿ ವಿದ್ವಾನ್ ಅಂಗಡಿ ಮಾರು ಕೃಷ್ಣಭಟ್ಟರು ಅಸ್ತಂಗತ

1 comment
Death News

ಉಡುಪಿ: ಪೇಜಾವರ ಮಠದ ಮಠಾಧಿಪತಿಗಳಾದ ಶ್ರೀ ಶ್ರೀವಿಶ್ವಪ್ರನ್ನ ತೀರ್ಥ ಸ್ವಾಮೀಜಿಯವರ (Shri Vishwaprasanna Theertha Swameeji Of Pejavar Matt) ಪೂರ್ವಾಶ್ರಮದ ತೀರ್ಥರೂಪರೂ, ಹಿರಿಯ ಸಂಸ್ಕೃತ ಮತ್ತು ತುಳು ಭಾಷಾ ವಿದ್ವಾಂಸ ಅಂಗಡಿಮಾರು ಕೃಷ್ಣ ಭಟ್ಟರು ಭಾನುವಾರ ರಾತ್ರಿ ವಯೋಸಹಜ ಅಸ್ವಾಸ್ಥ್ಯದಿಂದ ನಿಧನರಾಗಿದ್ದಾರೆ. ಅವರಿಗೆ 105 ವರ್ಷವಾಗಿತ್ತು.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ತುಳು ಭಾಷೆಯ ಸೌರ ಪಂಚಾಂಗವನ್ನು ಅತ್ಯಂತ ಶ್ರದ್ಧೆಯಿಂದ ಅನೇಕ ವರ್ಷಗಳಿಂದ ರಚಿಸಿ ಪ್ರಕಟಿಸುತ್ತಿದ್ದರು. ಇವರು ತುಳು ಲಿಪಿ ಸೌರ ಪಂಚಾಂಗ ಕರ್ತೃವಾಗಿದ್ದಾರೆ. ಸಂಪ್ರದಾಯ ಸದಾಚಾರ ನಿಷ್ಠರೂ ಅಪಾರ ದೈವಭಕ್ತರೂ ಆಗಿದ್ದ ಅವರಿಗೆ ಮಂಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಮಠಾಧೀಶರು ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳು ಸಂದಿವೆ.

ಶ್ರೀ ವಿಶ್ವಪ್ರಸನ್ನ ತೀರ್ಥರು ಸೇರಿದಂತೆ ಐವರು ಪುತ್ರರು, ಆರು ಪುತ್ರಿಯರು ಹಾಗೂ ಬಂಧು ವರ್ಗವನ್ನು ಕೃಷ್ಣ ಭಟ್ಟರು ಅಗಲಿದ್ದಾರೆ.

 

ಇದನ್ನು ಓದಿ: Plastic rice: ಗ್ರಾಹಕರೆ ಎಚ್ಚರ..!! ಅಂಗಡಿಯಿಂದ ತಂದದ್ದು ಪ್ಲಾಸ್ಟಿಕ್ ಅಕ್ಕಿಯೋ, ನಿಜವಾದ ಅಕ್ಕಿಯೋ? ಕೂಡಲೇ ಚೆಕ್ ಮಾಡಿ !!

You may also like

Leave a Comment