Home » Mumabi Baby Accident: ತಾಯಿಯ ಹುಟ್ಟುಹಬ್ಬದಂದು 11 ತಿಂಗಳ ಮಗುವಿನ ಸಾವು! ಮಾರ್ಗ ಮಧ್ಯದಲ್ಲೇ ಕಾದು ಕುಳಿತಿದ್ದ ಜವರಾಯ!!!

Mumabi Baby Accident: ತಾಯಿಯ ಹುಟ್ಟುಹಬ್ಬದಂದು 11 ತಿಂಗಳ ಮಗುವಿನ ಸಾವು! ಮಾರ್ಗ ಮಧ್ಯದಲ್ಲೇ ಕಾದು ಕುಳಿತಿದ್ದ ಜವರಾಯ!!!

1 comment
Mumabi Baby Accident

Mumabi Baby Accident: ತಾಯಿಯ ಹುಟ್ಟುಹಬ್ಬ ಎಂದು ಖುಷಿಯ ವಾತಾವರಣದಲ್ಲಿ ಇದ್ದ ಕುಟುಂಬ ಇಂದು ದುಃಖದ ಕಡಲಲ್ಲಿ ಮುಳುಗುವಂತಾಗಿದೆ. ಹೌದು, ಭಾಯಂದರ್‌ನ ರಸ್ತೆಯಲ್ಲಿರುವ ಉತ್ತಾನ್ ರಾಯ್ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ (Mumabi Baby Accident) ತಲೆಗೆ ಏಟಾಗಿ 11 ತಿಂಗಳ ದಕ್ಷ ಷಾ ಮೃತಪಟ್ಟಿದ್ದಾನೆ.

ದಕ್ಷ ಷಾ ಮಗುವಿನ ತಾಯಿ ಜಿಕ್ನಾ ಅವರ ಹುಟ್ಟುಹಬ್ಬ ಪ್ರಯುಕ್ತ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಕುಟುಂಬ ಬೈಕ್ ನಲ್ಲಿ ಗೊರೈ ಬೀಚ್‌ಗೆ ತೆರಳುತ್ತಿತ್ತು. ಮಗು ಮುಂದುಗಡೆ ಟ್ಯಾಂಕ‌ರ್ ಬಳಿ ಕೂತಿದ್ದು, ಮಗುವಿನ ತಾಯಿ ಮತ್ತು ಅಕ್ಕ ಬೈಕ್ ನ ಹಿಂದೆ ಕೂತಿದ್ದರು.

ಇದನ್ನು ಓದಿ: Neethu Vanajaksshi Bigg Boss Records :ಬಿಗ್ ಬಾಸ್ ಮನೆಯಿಂದ ಹೊರ ಬಂದ ನೀತು – ಅಬ್ಬಬ್ಬಾ..50 ದಿನಕ್ಕೆ ಇಷ್ಟೆಲ್ಲಾ ದಾಖಲೆ ಬರೆದ್ರಾ?!

ಆದರೆ ಗೊರೈ ಬೀಚ್ ಗೆ ಹೋಗುತ್ತಿದ್ದ ಮಾರ್ಗದಲ್ಲಿ ಕೆಸರು ತುಂಬಿದ ಪರಿಣಾಮ ಬೈಕ್‌ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ. ಪರಿಣಾಮ ತಂದೆ, ತಾಯಿ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಮುಂದೆ ಕೂತಿದ್ದ ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತ ಸ್ರಾವವಾಗಿ, ಪರಿಣಾಮ ಮಗು ಕೊನೆಯುಸಿರೆಳೆದಿದೆ. ಸದ್ಯ ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಆಕಸ್ಮಿಕ ಮರಣ ಎಂದು ದಾಖಲಾಗಿದೆ

ಇದನ್ನು ಓದಿ: Mumabi Baby Accident: ತಾಯಿಯ ಹುಟ್ಟುಹಬ್ಬದಂದು 11 ತಿಂಗಳ ಮಗುವಿನ ಸಾವು! ಮಾರ್ಗ ಮಧ್ಯದಲ್ಲೇ ಕಾದು ಕುಳಿತಿದ್ದ ಜವರಾಯ!!!

You may also like

Leave a Comment