Home » ಮಂಡ್ಯ: ಪಿತೃಪಕ್ಷದಂದೇ ತಂದೆಯನ್ನು ಕೊಂದ ಮಗ- ಕುಮ್ಮಕ್ಕು ನೀಡಿದ್ದೇ ತಾಯಿಯಂತೆ !!

ಮಂಡ್ಯ: ಪಿತೃಪಕ್ಷದಂದೇ ತಂದೆಯನ್ನು ಕೊಂದ ಮಗ- ಕುಮ್ಮಕ್ಕು ನೀಡಿದ್ದೇ ತಾಯಿಯಂತೆ !!

0 comments
Murder

Murder: ಮಂಡ್ಯ ಜಿಲ್ಲೆ ಬೆಸಗರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪಿತೃಪಕ್ಷದಂದೇ ಮಗ ತನ್ನ ತಂದೆಯನ್ನು ಕೊಂದು (Murder)ಹಾಕಿರುವ ಭೀಕರ ಘಟನೆ ನಡೆದಿದೆ. ಇದಕ್ಕೆ ತಾಯಿ ಕುಮ್ಮಕ್ಕು ನೀಡಿದ್ದು ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಚಾಪುರದೊಡ್ಡಿ ಗ್ರಾಮದಲ್ಲಿ ಉಮೇಶ್ (50) ಎಂಬಾತನ ಕೊಲೆಯಾಗಿದ್ದು, ಕುಟುಂಬ ಕಲಹದಿಂದ ತಂದೆಯನ್ನೇ ಮಗ ಕೊಂದಿದ್ದು, ಮಗ ಹಾಗೂ ಪ್ರಚೋದನೆ ನೀಡಿದ ತಾಯಿಯನ್ನು ಇದೀಗ ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ ಕೌಟುಂಬಿಕ ಸಮಸ್ಯೆಯಿಂದಾಗಿ ಗಂಡ ಮತ್ತು ಹೆಂಡತಿ ನಡುವೆ ಜಗಳ ಆಗಾಗ ನಡೆಯುತ್ತಿತ್ತು. ಐದು ತಿಂಗಳ ಹಿಂದೆಯೂ ಜಗಳ ನಡೆದು ಉಮೇಶ್ ಪತ್ನಿ ಸವಿತಾ(45) ಹಾಗೂ ಮಗ ಶಶಾಂಕ್(22) ಸೇರಿ ಆತನನ್ನು ಹೊಡೆದು ಕಾಲು ಮುರಿದು ಗಾಯಗೊಳಿಸಿದ್ದರು. ಬಳಿಕ ಸಂಬಂಧಿಕರ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಉಮೇಶ್‌ ವಾಸವಾಗಿದ್ದರು.

ಆದರೆ ಚಾಪುರದೊಡ್ಡಿ ಗ್ರಾಮದಲ್ಲಿ ಶನಿವಾರ ಪಿತೃಪಕ್ಷ ಇರುವುದರಿಂದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಗುರುವಾರ ಸವಿತಾ ಮತ್ತು ಉಮೇಶ್ ಬಂದಿದ್ದರು, ಈ ವೇಳೆ ಮತ್ತೆ ಜಗಳ ನಡೆದಿದೆ. ಆಗ ದೊಣ್ಣೆ ಹಾಗೂ ಮಚ್ಚುಗಳಿಂದ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ಹಾಗೂ ಮಾರಣಾಂತಿಕ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಉಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕೊಲೆಯಾದ ಉಮೇಶ್‌ ಅಣ್ಣ ನೀಡಿರುವ ದೂರಿನ ಮೇರೆಗೆ ಬೆಸಗರಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾವಿನ ವಿಷಯ ತಿಳಿಯುತ್ತಿದ್ದಂತೆ ಇಬ್ಬರು ಸ್ಥಳದಿಂದ ಪರಾರಿ ಆಗಿದ್ದು, ಅನುಮಾನಗೊಂಡು ಸ್ಥಳೀಯರು ಮನೆಗೆ ಹೋಗಿ ನೋಡಿದಾಗ ಕೊಲೆಯಾಗಿರುವುದು ಬಯಲಾಗಿದೆ.
ಸದ್ಯ ಸ್ಥಳಕ್ಕೆ ಮಂಡ್ಯ ಹೆಚ್ಚುವರಿ ಎಸ್ಪಿ ತಿಮ್ಮಯ್ಯ, ಮದ್ದೂರು ವೃತ್ತ ನಿರೀಕ್ಷಕ ವೆಂಕಟೇಗೌಡ, ಬೆಸಗರಹಳ್ಳಿ ಪಿಎಸ್ಐ ಮಲ್ಲಪ್ಪ ಪರಿಶೀಲನೆ ನಡೆಸಿ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

 

ಇದನ್ನು ಓದಿ: Pocso case: “ಎರಡು ನಿಮಿಷಗಳ ಸುಖ”ಕ್ಕಾಗಿ ಹುಡುಗಿಯರು….: ಹೈಕೋರ್ಟ್‌ನಿಂದ ಯುವಜನತೆಗೆ ಕಿವಿಮಾತು!

You may also like

Leave a Comment