Suicide: ಈಗಿನ ಯುವ ಜನಾಂಗ ಅದೇನು ಜೀವನ ಅಂತ ಮಾಡುವ ರೀತಿಯನ್ನು ಕಲಿಯುತ್ತಿದ್ದಾರೋ. ಸಣ್ಣಪುಟ್ಟ, ಕ್ಷುಲ್ಲಕ ಕಾರಣದ ಸಮಸ್ಯೆಗಳಿಗೆಲ್ಲ ಜೀವನದಲ್ಲಿ ಅವರು ಕಂಡುಕೊಂಡ ದಾರಿ ಒಂದೇ ಅದು ಆತ್ಮಹತ್ಯೆ. 10 ವರ್ಷದ ಮಕ್ಕಳೂ ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಇದೀಗ ಬೆಂಗಳೂರಿನಲ್ಲಿ ಬಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

7 ನೇ ತರಗತಿ ಓದುತ್ತಿದ್ದ ಗಾಂದಾರ್ ಎಂಬ ಬಾಲಕ ನೇಣಿಗೆ ಶರಣಾಗಿದ್ದಾನೆ. Forgive Me ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ನಿಜವಾದ ಕಾರಣ ಏನು ಅನ್ನೋದು ಇನ್ನು ತಿಳಿದುಬಂದಿಲ್ಲ. ಅದೇನೆ ಕಾರಣ ಇದ್ದರು ಅದನ್ನು ಪರಿಹರಿಸಲು ತಂದೆ ತಾಯಿ ಇರುತ್ತಾರೆ. ಅದು ಬಿಟ್ಟು ಇಂತ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಸರಿ?
ಆತ ಡೆತ್ ನೋಟ್ನಲ್ಲಿ ನನ್ನನ್ನು ಕ್ಷಮಿಸಿ ಅಂತ ಬರೆದಿದ್ದಾನೆ. ನಿಜವಾಗಿಯೂ ಅವನು ಮಾಡಿದ್ದು ಕ್ಷಮಿಸುವಂತ ಕೆಲಸನೇ ಅಲ್ಲ. ಇರುವ ಒಂದು- ಇಬ್ಬರು ಮಕ್ಕಳಲ್ಲಿ ಅವರು ಇಂಥ ನಿರ್ಧಾರ ತೆಗೆದುಕೊಂಡರೆ ಪೋಷಕರ ಕನಸು, ಮನಸ್ಸು ಏನಾಗಬೇಕು? ಡೆತ್ ನೋಟ್ನಲ್ಲಿ ಪ್ರೀತಿಯ ಕುಟುಂಬದವರೇ ಯಾರು ಪತ್ರವನ್ನು ಓದುತ್ತಿದ್ದೀರೋ ನಾನು ಈಗಾಗಲೇ ಸ್ವರ್ಗದಲ್ಲಿ ಇದ್ದೀನಿ. ಯಾರು ಸಹ ನನ್ನ ತಪ್ಪಾಗಿ ಭಾವಿಸಬೇಡಿ, ನಂಗೊತ್ತು ನಿಂಗೆ ಎಷ್ಟು ನೋವಾಗ್ತಾ ಇದೆ ಅಂತ. ನಾನು ಈ ಘಟನೆ ಮಾಡಿಕೊಳ್ಳಕ್ಕೆ ಈ ಮನೆಯನ್ನು ಇನ್ನಷ್ಟು ಬೆಳಗಲು ಮಾಡಿಕೊಳ್ಳುತ್ತಿದ್ದೇನೆ. ನಂಗೊತ್ತು ನಿಮಗೆ ಕೋಪ ಬರಲು ಕಾರಣನಾಗಿದ್ದೇನೆ. ನನ್ನ ಉದ್ದೇಶ ಸಾವಾಗಿರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ, ಇದು ನಾನೇ ಮಾಡಿಕೊಳ್ಳುತ್ತಿದ್ದೇನೆ. ನನ್ನ 14 ವರ್ಷ ನಾನು ಖುಷಿಯಾಗಿದ್ದೇ. ನಾನು ಸ್ವರ್ಗದಲ್ಲಿ ತುಂಬಾ ಖುಷಿಯಾಗಿದ್ದೇನೆ. ನನ್ನ ಸ್ನೇಹಿತರಿಗೆ ಎಲ್ಲರಿಗೂ ಹೇಳಿ ನಾನು ಖುಷಿಯಾಗಿದ್ದೇನೆ. ಗುಡ್ ಬಾಯ್ ಅಮ್ಮ ಎಂದು ಬರೆದುಕೊಂಡಿದ್ದಾನೆ.
ಬೆಂಗಳೂರು ನಗರದ ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನಲ್ಲಿ ಈ ಘಟನೆ ನಡೆದಿದ್ದು. ಬೆಳಗ್ಗೆ ತಂದೆ ಬಾಲಕನ ರೂಮ್ ಗೆ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕನ ತಂದೆ ಗಣೇಶ್ ಪ್ರಸಾದ್, ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಾಲಕನ ತಾಯಿ ಸವಿತಾ ಕೂಡ ಜನಪದ ಗಾಯಕಿಯಾಗಿದ್ದು, ಕಳೆದ ಶುಕ್ರವಾರ ಕಾರ್ಯಕ್ರಮದ ಮೇಲೆ ಆಸ್ಟ್ರೇಲಿಯಾ ಗೆ ತೆರಳಿದ್ದ ಕಾರಣ ಸದ್ಯ ತಾಯಿ ವಾಪಸು ಬರೋ ತನಕ ಮರಣೋತ್ತರ ಪರೀಕ್ಷೆ ನಡೆಸದೇ ಇರಲು ತೀರ್ಮಾನ ಮಾಡಲಾಗಿದೆ.
ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸದ್ಯ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Vittla: ವಿಟ್ಲ ದೇವಸ್ಥಾನದ ಹುಂಡಿಹಣ ಕಳ್ಳತನ: ಮೂವರು ಅರೆಸ್ಟ್
