7
Hassan : ಹಾಸನದಲ್ಲಿ ಸರಣಿ ಹೃದಯಘಾತಕ್ಕೆ ಕೊನೆ ಇಲ್ಲದಂತಾಗಿದೆ. ದಿನೇ ದಿನೇ ಹೃದಯಘಾತದಿಂದ ಸಾಯುವವರ ಸಂಖ್ಯೆ ಹಾಸನದಲ್ಲಿ ಹೆಚ್ಚಾಗುತ್ತಿದೆ. ಇದೀಗ ಗುರುವಾರ ರಾತ್ರಿ ಮದನ್ (21) ಯುವಕ ಬಲಿಯಾಗಿದ್ದಾನೆ. ಈ ಮೂಲಕ ಹಾಸನದಲ್ಲಿ ಹೃದಯಘಾತಕ್ಕೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಅಂದಹಾಗೆ ಮೂಲತಃ ಹಾಸನದ ಚಿಟ್ನಹಳ್ಳಿ ಗ್ರಾಮದ ಈತ ತನ್ನ ತಾಯಿಯೊಡನೆ ಚನ್ನಪಟ್ಟಣದಲ್ಲಿ ವಾಸವಾಗಿದ್ದ. ಹಾಸನದ ಚಿಕ್ಕಕೊಂಡಗುಳದಲ್ಲಿರುವ ತನ್ನ ಭಾವನ ಮನೆಗೆ ಬಂದಿದ್ದಾಗ ಸಾವು ಸಂಭವಿಸಿದೆ.
ನಿನ್ನೆ ರಾತ್ರಿ ಇದ್ದಕ್ಕಿದ್ದಂತೆಯೇ ಮದನ್ ಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಬದವರು ಆಸ್ಪತ್ರೆಗೆ ಕೊಂಡೊಯ್ದರಾದರೂ ಅಷ್ಟರಲ್ಲಿ ಮದನ್ ಮೃತಪಟ್ಟಿದ್ದಾನೆ.
