Home » Death: ಆಸ್ಪತ್ರೆಯ ಕಟ್ಟಡ ಮೇಲಿಂದ ಬಿದ್ದು ನರ್ಸ್ ಸಾವು: ಸಾವಿನ ಸುತ್ತ ಕುಟುಂಬಸ್ಥರ ಅನುಮಾನದ ಹುತ್ತ!

Death: ಆಸ್ಪತ್ರೆಯ ಕಟ್ಟಡ ಮೇಲಿಂದ ಬಿದ್ದು ನರ್ಸ್ ಸಾವು: ಸಾವಿನ ಸುತ್ತ ಕುಟುಂಬಸ್ಥರ ಅನುಮಾನದ ಹುತ್ತ!

0 comments

Death: ಎರಡು ಅಂತಸ್ತಿನ ಆಸ್ಪತ್ರೆಯ(Hospital) ಕಟ್ಟಡದ ಮೇಲಿಂದ ಬಿದ್ದು ನರ್ಸ್(Nurse) ಸಾವನ್ನಪ್ಪಿದ(Death) ಘಟನೆ ಚಿತ್ರದುರ್ಗದ(Chitradurga) ಜೆಸಿಆರ್ ರಸ್ತೆಯಲ್ಲಿರುವ ಪಿವಿಎಸ್ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಎರಡನೇ ಫ್ಲೋರ್ ನಿಂದ ಮಹಿಳೆ(Lady) ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. 35 ವರ್ಷದ ಇಂದ್ರಮ್ಮಾ ಟಿ. ಮೃತ ದುರ್ದೈವಿ.

ಇಂದ್ರಮ್ಮ ಟಿ. ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದವರು. ಇವರು ಕಳೆದ 12ವರ್ಷಗಳಿಂದ ಪಿವಿಎಸ್ ಆಸ್ಪತ್ರೆಯಲ್ಲಿ ಕೆಲಸ‌ ಮಾಡುತ್ತಿದ್ದಾರೆ. ಈಕೆಯ ಸಾವಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಧರಮೂರ್ತಿ, ಸಿಬ್ಬಂದಿಗಳೇ ಕಾರಣ ಎಂದು ಅವರ ವಿರುದ್ದ ಮೃತ ಯುವತಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿ ಕರೆಂಟ್ ಶಾಕ್ ಹೊಡೆದು ಇಂದ್ರಮ್ಮಾ ಬಿದ್ದಿರುವುದಾಗಿ ಹೇಳಿಕೆ ನೀಡಿದ್ದಾರೆ. ಕೆಳಗೆ ಬಿದ್ದ ಗಾಯಾಳು ಇಂದ್ರಮ್ಮನನ್ನು ಪಿವಿಎಸ್ ಆಸ್ಪತ್ರೆ ಸಿಬ್ಬಂದಿಗಳು
ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯದರಾದರು, ಅವರು ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ ಇಂದ್ರಮ್ಮನನ್ನು ಆಸ್ಪತ್ರೆಗೆ ದಾಖಲಿಸಿ ಪಿವಿಎಸ್ ಆಸ್ಪತ್ರೆ ಸಿಬ್ಬಂದಿಗಳು ಕಾಲ್ಕಿತ್ತಿದ್ದಾರೆ. ಇದೀಗ ಇಂದ್ರಮ್ಮ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ.

You may also like

Leave a Comment