Home » Mahakumbh Mela: ಮಹಾ ಕುಂಭಮೇಳಕ್ಕೆ ಹೋಗಿದ್ದ ಮತ್ತೊಬ್ಬ ಕನ್ನಡಿಗನ ಸಾವು!

Mahakumbh Mela: ಮಹಾ ಕುಂಭಮೇಳಕ್ಕೆ ಹೋಗಿದ್ದ ಮತ್ತೊಬ್ಬ ಕನ್ನಡಿಗನ ಸಾವು!

0 comments

Mahakumbh Mela: ಪ್ರಯಾಗ್‌ರಾಜ್‌ನ (Prayagraj) ಸಂಗಮ್ ಘಾಟ್‌ನಲ್ಲಿ (Sangam Ghat) ಆಯೋಜಿಸಲಾಗಿದ್ದ ಮಹಾಕುಂಭದ (Mahakumbh) ಮೌನಿ ಅಮವಾಸ್ಯೆಯಂದು ಸಂಭವಿಸಿದ ಕಾಲ್ತುಳಿತದಲ್ಲಿ (Stampede) ಹಲವರು ಸಾವನ್ನಪ್ಪಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

 

ಅಂತೆಯೇ ಈ ನಡುವೆ 15 ದಿನದ ಹಿಂದೆ ಪ್ರಯಾಗ್‌ರಾಜ್‌ಗೆ ತೆರಳಿದ್ದ ಕೊಪ್ಪಳದ (Koppal) ಯುವಕನೋರ್ವ ಸಾವನ್ನಪ್ಪಿರುವುದಾಗಿ (Death) ಮಾಹಿತಿ ತಿಳಿದು ಬಂದಿದೆ. ಹೌದು, ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ಕೊಪ್ಪಳದಿಂದ ಹೋಗಿದ್ದ ಕಾರಟಗಿ ತಾಲ್ಲೂಕಿನ ಸಿದ್ದಾಪುರದ 27 ವರ್ಷದ ಯುವಕ ಪ್ರವೀಣ್ ಹೊಸಮನಿ, ಪ್ರಯಾಗರಾಜ್ ನಿಂದ ಅಯೋಧ್ಯೆಗೆ ಹೋಗುವಾಗ ಗೋರಖಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ತಗುಲಿ ಮೃತಪಟ್ಟಿರೋದಾಗಿ ಮಾಹಿತಿ ತಿಳಿದು ಬಂದಿದೆ.

You may also like