Viral Video : ಮೂಕ ಪ್ರಾಣಿಗಳಿಗೆ ಇರುವ ನಿಯತ್ತು ಬೇರಾರಿಗೂ ಇಲ್ಲ. ಅವುಗಳಿಗೆ ಒಂದು ತುತ್ತು ಊಟ ಹಾಕಿದರೂ ಕೂಡ ಸಾಯುವವರೆಗೂ ನಮ್ಮನ್ನು ಬಿಡಲಾರವು. ಈ ರೀತಿಯ ಅನೇಕ ಘಟನೆಗಳು ನಮ್ಮ ಸುತ್ತಮುತ್ತಲು ದಿನಾಲು ನಡೆಯುತ್ತಿರುತ್ತವೆ. ಇದೀಗ ಇಂಥದ್ದೇ ಒಂದು ಹಸು ಒಂದರ ವಿಶೇಷ ಘಟನೆ ಬೆಳಕಿಗೆ ಬಂದಿದ್ದು ಇದನ್ನು ತಿಳಿದರೆ ಇಂಥವರು ಕಣ್ಣಲ್ಲೂ ಕೂಡ ನೀರು ಬರುತ್ತದೆ.
ಅಂದಹಾಗೆ ನವದೆಹಲಿಯಲ್ಲಿ ಒಂದು ಮೂಕ ಪಶು ತನಗೆ ಆಹಾರ ನೀಡುತ್ತಿದ್ದ ಅಜ್ಜಿಯ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿತ್ತು. ದಿನಾಲು ಮನೆಯ ಗೇಟ್ ಅನ್ನು ತಾನಾಗಿಯೇ ತೆರೆದು ಬರುತ್ತಿದ್ದ ದನ, ಅಜ್ಜಿ ಕೊಡುತ್ತಿದ್ದ ರೊಟ್ಟಿಯನ್ನು ತಿಂದು ಹೋಗುತ್ತಿತ್ತು. ಇದು ಪ್ರತಿದಿನ ನಡೆಯುತ್ತಿತ್ತು. ಆದರೆ ಅಜ್ಜಿ ತೀರಿಹೋದ ದಿನ, ಎಲ್ಲ ಕುಟುಂಬಸ್ಥರಂತೆ, ಈ ಪಶು ಕೂಡಾ ಅಂತ್ಯಸಂಸ್ಕಾರಕ್ಕೆ ಬಂದಿದೆ. ಇದನ್ನು ನೋಡಿ ಅಲ್ಲಿದ್ದವರ ಕಣ್ಣಾಲಿಗಳು ತುಂಬಿವೆ.
ಹೌದು, ಬದುಕಿದ್ದಾಗ ಪ್ರತಿನಿತ್ಯ ತನಗೆ ರೊಟ್ಟಿ ನೀಡಿ ಪ್ರೀತಿ ತೋರಿಸುತ್ತಿದ್ದ ಅಜ್ಜಿ ತೀರಿಕೊಂಡಾಗ ಈ ಹಸು ಅಜ್ಜಿ ಸತ್ತಾಗ
ಅಂತಿಮ ದರ್ಶನ ಪಡೆದು, ಅಜ್ಜಿಯನ್ನು ಸ್ಮಶಾನಕ್ಕೆ ಕರೆದೊಯ್ಯುವ ಸಮಯದಲ್ಲಿ, ಅಂತಿಮ ಯಾತ್ರೆಯಲ್ಲಿಯೂ ಈ ಪಶು ಪಾಲ್ಗೊಂಡಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
