Home » Rajath: ಬಿಗ್ ಬಾಸ್ ಸ್ಪರ್ಧಿ ರಜತ್’ಗೆ ಕೊಲೆ ಬೆದರಿಕೆ; ಪೊಲೀಸರಿಗೆ ದೂರು!

Rajath: ಬಿಗ್ ಬಾಸ್ ಸ್ಪರ್ಧಿ ರಜತ್’ಗೆ ಕೊಲೆ ಬೆದರಿಕೆ; ಪೊಲೀಸರಿಗೆ ದೂರು!

0 comments

Rajath: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ ಕಿಶನ್‌ ಅವರಿಗೆ ಕಿಡಿಗೇಡಿಗಳಿಂದ ಕೊಲೆ ಬೆದರಿಕೆಯ ಸಂದೇಶಗಳು ಬರುತ್ತಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಅವರು ಗುರುವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಪ್ರತಿಯನ್ನು ಪಶ್ಚಿಮ ವಿಭಾಗದ ಸೆನ್‌ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಿದ್ದು ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

‘ನನ್ನ ಪತ್ನಿಯ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಬೆದರಿಕೆ ಕರೆಗಳು ಬರುತ್ತಿವೆ. ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ರಜತ್‌ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Dharmasthala: ನನಗೆ ಗನ್‌ಮ್ಯಾನ್‌ ಭದ್ರತೆ ನೀಡಿ: ಎಸ್‌ಐಟಿ ಮುಂದೆ ಮಾಸ್ಕ್‌ಮ್ಯಾನ್‌ ಬೇಡಿಕೆ

You may also like