Home » ಕೆಂಪು ಕೋಟೆ ಗಲಭೆಯ ಪ್ರಮುಖ ಆರೋಪಿ, ನಟ ದೀಪ್‌ ಸಿಧು ಅಪಘಾತಕ್ಕೆ ಬಲಿ

ಕೆಂಪು ಕೋಟೆ ಗಲಭೆಯ ಪ್ರಮುಖ ಆರೋಪಿ, ನಟ ದೀಪ್‌ ಸಿಧು ಅಪಘಾತಕ್ಕೆ ಬಲಿ

by Praveen Chennavara
0 comments

ಕೆಂಪು ಕೋಟೆ ಗಲಭೆಯ ಪ್ರಮುಖ ಆರೋಪಿ, ನಟ ದೀಪ್‌ ಸಿಧು ಮಂಗಳವಾರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಸಿಧು, ಮಂಗಳವಾರ ದೆಹಲಿಯಿಂದ ಸ್ಕಾರ್ಪಿಯೋ ಕಾರಿನಲ್ಲಿ ಪಂಜಾಬ್‌ಗ ಮರಳುತ್ತಿದ್ದರು. ವೆಸ್ಟ್‌ರ್ನ್ ಪೆರಿಪರಲ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ರಾತ್ರಿ 8.30ರ ಸಮಯಕ್ಕೆ ಸಿಘು ಗಡಿಯಲ್ಲಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದಿಂದಾಗಿ ಗಂಭೀರ ಗಾಯಾಳುವಾಗಿದ್ದ ಸಿಧುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪ್ರಾಣ ಬಿಟ್ಟಿರುವುದಾಗಿ ವರದಿಯಾಗಿದೆ.

2021ರ ಗಣರಾಜ್ಯೋತ್ಸವ ಸಮಯದಲ್ಲಿ ಹೋರಾಟನಿರತ ರೈತರು ಕೆಂಪುಕೋಟೆ ಮೇಲೆ ದಾಳಿ ನಡೆಸಿದ್ದರು. ಆ ಪ್ರಕರಣದಲ್ಲಿ ಸಿಧು ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಪ್ರಕರಣ ಸಂಬಂಧ ಫೆ.1ರಂದು ಬಂಧಿತರಾಗಿದ್ದ ಅವರು ಏ.16ಕ್ಕೆ ಜಾಮೀನು ಪಡೆದು ಹೊರಬಂದಿದ್ದರು

You may also like

Leave a Comment