UP Roadways Free: ದೀಪಾವಳಿಯ ಹಬ್ಬದಂದು ಸಾರಿಗೆ ಸಂಸ್ಥೆಯು ತನ್ನ ಪ್ರಯಾಣಿಕರಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಉತ್ತರಪ್ರದೇಶ ಸಾರಿಗೆ ಸಂಸ್ಥೆಯು ರಾಜಧಾನಿಯ ಬಸ್‌ಗಳ ದರವನ್ನು ಶೇ.10 ರಷ್ಟು ಕಡಿಮೆ ಮಾಡಿದ್ದು, ಪ್ರಯಾಣಿಕರ ಜೇಬಿನ ಹೊರೆ ಕಡಿಮೆ ಮಾಡಿದೆ. ರಾಜಧಾನಿ ಬಸ್ ಸೇವೆಯ ದರವನ್ನು ಉತ್ತರಪ್ರದೇಶ ಸಾರಿಗೆ ಸಂಸ್ಥೆ ಕಡಿಮೆ ಮಾಡಿದ್ದು, ಜನರಿಗೆ ನಿಜಕ್ಕೂ ಖುಷಿ ನೀಡಿದೆ.
ಹಬ್ಬದ ಕಾರಣ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳ ಪ್ರಯಾಣ ದರವನ್ನು ಕಡಿತಗೊಳಿಸಲಾಗಿದೆ.
ಹೊಸ ದರ ಈ ರೀತಿ ಇದೆ: ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗೆ ರೂ.100 ವರೆಗೆ ರಿಯಾಯಿತಿ ಸಿಗಲಿದೆ. ಇದಕ್ಕೂ ಮೊದಲು ಲಕ್ನೋದಿಂದ ದೆಹಲಿಗೆ ಹೋಗುವ ರಾಜಧಾನಿ ಬಸ್‌ಗಳ ದರ ರೂ.832 ಆಗಿತ್ತು. ಇದೀಗ ಹೊಸ ದರಗಳು ಜಾರಿಯಾದರಿಂದ ಲಕ್ನೋದಿಂದ ದೆಹಲಿಗೆ ಹೋಗುವ ಪ್ರಯಾಣಿಕರು 732 ರೂ. ನಲ್ಲಿ ಪ್ರಯಾಣ ಮಾಡಬಹುದು. ಈ ಮೂಲಕ ಭರ್ಜರಿ 93ರೂ. ರಿಯಾಯಿತಿ ಪಡೆಯಬಹುದು. ಬಲ್ಲಿಯಾ ತನಕ 685 ಇದ್ದ ಪ್ರಯಾಣ ದರ ಇದೀಗ 623 ರೂ ಆಗಿದ್ದು, ಅಜಂಗಢದ ಪ್ರಯಾಣ ದರ 513 ರೂ. ಇತ್ತು, ಇದೀಗ 467 ರೂ. ಆಗಿದೆ. ಗೋರಖ್‌ಪುರದ ಪ್ರಯಾಣವು ಈ ಹಿಂದೆ 506 ರೂ ಇದ್ದು, ಇದೀಗ 460 ರೂ. ಆಗಿದೆ.
