Home » Delhi Airport: ಭಾರೀ ಮಳೆ, ಬಿರುಗಾಳಿಗೆ ಟರ್ಮಿನಲ್‌ 1ರ ಶೇಡ್‌ ಕುಸಿತ, ವಿಮಾನ ಸಂಚಾರದಲ್ಲಿ ವ್ಯತ್ಯಯ

Delhi Airport: ಭಾರೀ ಮಳೆ, ಬಿರುಗಾಳಿಗೆ ಟರ್ಮಿನಲ್‌ 1ರ ಶೇಡ್‌ ಕುಸಿತ, ವಿಮಾನ ಸಂಚಾರದಲ್ಲಿ ವ್ಯತ್ಯಯ

0 comments

Delhi Airport: ಭಾರೀ ಮಳೆಯ ಜೊತೆಗೆ ಬಿರುಗಾಳಿಯಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಟರ್ಮಿನಲ್‌ 1 ರ ಆಗಮನ ವಿಭಾಗದ ಹೊರಭಾಗದ ಶೆಡ್‌ ಭಾನುವಾರ ಮುಂಜಾನೆ ಕುಸಿದು ಬಿದ್ದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, 49 ವಿಮಾನಗಳನ್ನು ಬೇರೆ ಕಡೆಗೆ ತಿರುಗಿಸಲಾಗಿರುವ ಕುರಿತು ವರದಿಯಾಗಿದೆ.

ಶೇಡ್‌ ಕುಸಿತದಿಂದ ಹೊರ ಆವರಣದ ಒಂದು ಭಾಗವು ಪಾದಾಚಾರಿ ಮಾರ್ಗದ ಮೇಲೆ ಕುಸಿದಿದೆ. ನೀರು ತುಂಬಿ ಹರಿಯುತ್ತಿದೆ. ರಕ್ಷಣಾ ಕಾರ್ಯವನ್ನು ಕೂಡಲೇ ಕೈಗೊಳ್ಳಲಾಗಿದೆ.

You may also like