Home » Delhi: ದೆಹಲಿ ಸ್ಫೋಟ ಪ್ರಕರಣ – ಐ20 ಕಾರಿನ ಬಗ್ಗೆ ಶಾಕಿಂಗ್ ಮಾಹಿತಿ ಬಯಲು !!

Delhi: ದೆಹಲಿ ಸ್ಫೋಟ ಪ್ರಕರಣ – ಐ20 ಕಾರಿನ ಬಗ್ಗೆ ಶಾಕಿಂಗ್ ಮಾಹಿತಿ ಬಯಲು !!

by Mallika
0 comments

Dehli : ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸ್ಫೋಟಗೊಂಡು ಒಂಬತ್ತು ಜನರ ಸಾವಿಗೆ ಕಾರಣವಾದ ಬಿಳಿ ಬಣ್ಣದ ಹುಂಡೈ i20 ಕಾರು ಓಡಾಡಿದ್ದ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾಗಿದ್ದು, ಕೆಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.

ಹೌದು, ಸ್ಫೋಟ ನಡೆದ ಬೆನ್ನಲ್ಲೇ ಅಲರ್ಟ್‌ ಆದ ಪೊಲೀಸರು (Delhi Police) ಮೊದಲು ರಸ್ತೆಯಲ್ಲಿರುವ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಐ20 (i20)ನಿಂದ ಈ ಕೃತ್ಯ ನಡೆದಿದೆ ಎನ್ನುವುದು ಗೊತ್ತಾಗಿದೆ. ಐ20 ಕಾರಿನಿಂದ ಸ್ಫೋಟ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆ ಇಡೀ ದಿನ ಈ ಕಾರು ಎಲ್ಲೆಲ್ಲಿ ಓಡಾಡಿದೆ. ದೆಹಲಿಗೆ ಎಲ್ಲಿಂದ ಪ್ರವೇಶಿಸಿದೆ ಎಂಬ ಮಾಹಿತಿಯನ್ನು ಕಲೆಹಾಕಲು ಮತ್ತಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿದ್ದಾರೆ. ಆಗ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ.

ಕಾರು ಎಲ್ಲಿಂದ ಬಂತು?
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಸೋಮವಾರ ಬೆಳಿಗ್ಗೆ 7:30 ಕ್ಕೆ ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆಯ ಹೊರಗೆ ಕಾರು ಬಂದಿದೆ. ನಂತರ ಬೆಳಿಗ್ಗೆ 8:13ಕ್ಕೆ ಕಾರು ಬದರ್ಪುರ್ ಟೋಲ್ ದಾಟಿ ದೆಹಲಿಯನ್ನು ಪ್ರವೇಶಿಸಿದೆ. ಬೆಳಿಗ್ಗೆ 8:20ಕ್ಕೆ ಓಖ್ಲಾ ಕೈಗಾರಿಕಾ ಪ್ರದೇಶದ ಬಳಿಯ ಪೆಟ್ರೋಲ್ ಪಂಪ್ ಬಳಿ ಕಾರು ಕಾಣಿಸಿಕೊಂಡಿದೆ. ಮಧ್ಯಾಹ್ನ 3:19 ಕ್ಕೆ ಕಾರು ಕೆಂಪು ಕೋಟೆ ಸಂಕೀರ್ಣದ ಬಳಿಯ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಿ ಸುಮಾರು ಮೂರು ಗಂಟೆಗಳ ಕಾಲ ಅಲ್ಲಿಯೇ ನಿಂತಿತ್ತು. ಸಂಜೆ 6:22 ಕ್ಕೆ, ಕಾರು ಪಾರ್ಕಿಂಗ್ ಸ್ಥಳದಿಂದ ಹೊರಬಂದು ಕೆಂಪು ಕೋಟೆಯ ಕಡೆಗೆ ಹೋಯಿತು. ಕೇವಲ 24 ನಿಮಿಷಗಳ ನಂತರ ಸಂಜೆ 6:52 ಕ್ಕೆ ಕಾರು ಇನ್ನೂ ಚಲಿಸುತ್ತಿರುವಾಗ ಭಾರಿ ಸ್ಫೋಟ ಸಂಭವಿಸಿದೆ.

ಸ್ಫೋಟಕ್ಕೂ ಮುನ್ನ ದರಿಯಾಗಂಜ್, ಕೆಂಪು ಕೋಟೆ ಪ್ರದೇಶ, ಕಾಶ್ಮೀರಿ ಗೇಟ್ ಮತ್ತು ಸುನೇಹ್ರಿ ಮಸೀದಿ ಪ್ರದೇಶದಲ್ಲೂ ಕಾರು ಕಾಣಿಸಿಕೊಂಡಿದೆ. ಈ ಎಲ್ಲಾ ಮಾರ್ಗಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಯಾವ ಟೋಲ್ ಪ್ಲಾಜಾಗಳ ಮೂಲಕ ಕಾರು ಹಾದುಹೋಗಿದೆ, ಯಾವ ಸಿಗ್ನಲ್‌ನಲ್ಲಿ ಅದು ಎಷ್ಟು ಸಮಯ ನಿಂತಿತು, ಪಾರ್ಕಿಂಗ್ ಸ್ಥಳದಿಂದ ಹೊರಬಂದ ನಂತರ ಎಲ್ಲಿ ಕಾಣಿಸಿಕೊಂಡಿತು ಎಂಬುದನ್ನು ಒಳಗೊಂಡಂತೆ ಇಡೀ ಮಾರ್ಗದ ಟೈಮ್‌ಲೈನ್ ಅನ್ನು ರಚಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

You may also like