Home » Missing Case: ಹುಟ್ಟುಹಬ್ಬ ಆಚರಿಸಿಲ್ಲವೆಂದು ಮನೆಯನ್ನೇ ಬಿಟ್ಟುಹೋದ 13ರ ಬಾಲಕ !! ಹುಡುಕಿ ಕೇಕ್ ಕತ್ತರಿಸಿದ ಪೊಲೀಸರು

Missing Case: ಹುಟ್ಟುಹಬ್ಬ ಆಚರಿಸಿಲ್ಲವೆಂದು ಮನೆಯನ್ನೇ ಬಿಟ್ಟುಹೋದ 13ರ ಬಾಲಕ !! ಹುಡುಕಿ ಕೇಕ್ ಕತ್ತರಿಸಿದ ಪೊಲೀಸರು

0 comments
Missing Case

Missing Case: ನವದೆಹಲಿಯ ಘಾಟ್‌ಕೋಪರ್‌ನಲ್ಲಿ 13 ವರ್ಷದ ಬಾಲಕ ತನ್ನ ಕುಟುಂಬ ಹುಟ್ಟುಹಬ್ಬದ ಕೇಕ್ ಖರೀದಿ ಮಾಡಲು ಆಗಿಲ್ಲವೆಂದು ಮನೆಯಿಂದ ನಾಪತ್ತೆಯಾದ (Missing Case)ಘಟನೆ ವರದಿಯಾಗಿದೆ.

ಬಾಲಕ ತನ್ನ ತಾಯಿ ಶೈದಾ ಶಾಖ್ (42) ಮತ್ತು ಆಕೆಯ ಪೋಷಕರೊಂದಿಗೆ ನೆಲೆಸಿದ್ದ. ಅಕ್ಟೋಬರ್ 4 ರಂದು, ಘಾಟ್ಕೋಪರ್ ಕುಟುಂಬವು ತಮ್ಮ ಮಗ(13)ಸಂಜೆ 4 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಆರನೇ ತರಗತಿಯ ವಿದ್ಯಾರ್ಥಿ ಬುಧವಾರ ನಾಪತ್ತೆಯಾದ ಬಳಿಕ ಪೊಲೀಸರು ಬಾಲಕನ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.

ಪೊಲೀಸ್ ಬಾಲಕನ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ಪರಿಶೀಲಿಸಿ ಹುಡುಗನ ಪತ್ತೆಗೆ ಹುಡುಕಾಟ ನಡೆಸಿದ್ದು, ಘಾಟ್ಕೋಪರ್‌ನ ಪಾರ್ಸಿವಾಡಿ ಪ್ರದೇಶದಲ್ಲಿ ಬಾಲಕ ಸಿಕ್ಕಿದ್ದಾನೆ. ಪೊಲೀಸ್ ತಂಡ ಅವನನ್ನು ಘಾಟ್ಕೋಪರ್‌ನಲ್ಲಿರುವ ತಮ್ಮ ಅಪರಾಧ ವಿಭಾಗದ ಘಟಕಕ್ಕೆ ಕರೆದುಕೊಂಡು ಬಂದು ಮನೆ ಬಿಟ್ಟು ಹೋಗಲು ಕಾರಣವೇನು ಎಂದು ಅವನನ್ನು ಕೇಳಿದಾಗ ತನ್ನ ಜನ್ಮದಿನಕ್ಕೆ ಮನೆಯವರು ಹುಟ್ಟುಹಬ್ಬದ ಕೇಕ್(Birthday Cake)ತರಲು ಸಾಧ್ಯವಾಗಲಿಲ್ಲ ಎಂದು ಬೇಸರಗೊಂಡು ಮನೆ ಬಿಟ್ಟು ಹೋದೆ ಎಂದು ಆ ಹುಡುಗ ತಿಳಿಸಿದ್ದಾನೆ. ಪೊಲೀಸ್ ತಂಡ ಆ ಹುಡುಗನ ಹುಟ್ಟುಹಬ್ಬದಂದು ಕೇಕ್ ತರಿಸಿ ಬರ್ತ್ ಡೇ ಆಚರಿಸಿ ಉತ್ತಮ ಉಡುಗೊರೆಯನ್ನು ನೀಡುವ ಮೂಲಕ ಅವನ ಹುಟ್ಟುಹಬ್ಬದ ಆಸೆಯನ್ನು ಈಡೇರಿಸುವ ಮೂಲಕ ಮಾನವೀಯತೆ ಮೆರೆದ ಅಪರೂಪದ ಘಟನೆ ವರದಿಯಾಗಿದೆ.

You may also like

Leave a Comment