Delhi : ದೆಹಲಿ ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿ i20 ಕಾರು ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾರಿನ ಮಾಲೀಕ ತಾರೀಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಉಗ್ರರ ಕೈವಾಡದ ಅನುಮಾನ ಬಲವಾಗುತ್ತಿದೆ. ಈ ನಡುವೆ ಸ್ಫೋಟಗೊಂಡ ಕಾರು ಫರೀದಾಬಾದ್ ನೋಂದಣಿ ಕಾರು ಎಂಬುದು ತಿಳಿದು ಬಂದಿದೆ. ಈ ಕಾರಿನ ಮಾಲೀಕ ಸಲ್ಮಾನ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾರನ್ನು ಮಾರಾಟ ಮಾಡಿರುವುದಾಗಿ ಸಲ್ಮಾನ್ ಹೇಳಿದ್ದಾನೆ. ಆದರೆ ಈ ಸ್ಫೋಟದ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಲಿಂಕ್ ಪತ್ತೆಯಾಗಿದೆ.
ಇನ್ನೂ ದೆಹಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ) ಮತ್ತು ಬಿಎನ್‌ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
