Home » Delhi: ಹೀನ ಕೃತ್ಯ: 85 ವರ್ಷದ ವೃದ್ಧೆ ತುಟಿ ಹರಿದು ಅತ್ಯಾಚಾರ ಮಾಡಿದ 28 ವರ್ಷದ ವ್ಯಕ್ತಿ!

Delhi: ಹೀನ ಕೃತ್ಯ: 85 ವರ್ಷದ ವೃದ್ಧೆ ತುಟಿ ಹರಿದು ಅತ್ಯಾಚಾರ ಮಾಡಿದ 28 ವರ್ಷದ ವ್ಯಕ್ತಿ!

0 comments

Delhi: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.ಇದೀಗ, ದೆಹಲಿಯ(Delhi) ನೇತಾಜಿ ಸುಭಾಷ್ ಪ್ರದೇಶದಲ್ಲಿ ಶುಕ್ರವಾರ 85 ವರ್ಷದ ವೃದ್ಧೆ ಮೇಲೆ ಅತ್ಯಾಚಾರ (Rape)ನಡೆದಿರುವ ಭಯಾನಕ ಘಟನೆ ವರದಿಯಾಗಿದೆ. ಈ ಘಟನೆ ಕುರಿತಂತೆ ಪೊಲೀಸರು(Delhi Police)ಆರೋಪಿಯನ್ನು ಬಂಧಿಸಿದ್ದಾರೆ.

 

ದೆಹಲಿಯ ನೇತಾಜಿ ಸುಭಾಷ್ ಪ್ರದೇಶದ ಸ್ಲಂವೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ 85 ವರ್ಷದ ಅಜ್ಜಿ (Grand Mother)ಮೇಲೆ ಮುಂಜಾನೆ 4 ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ. ಆರೋಪಿ ಅಜ್ಜಿ ಮೇಲೆ ದೌರ್ಜನ್ಯವೆಸಗಿದ್ದು ಸಾಲದೆಂಬಂತೆ ಬ್ಲೇಡ್‌ನಿಂದ(Blade)ಅಜ್ಜಿಯ ತುಟಿಯನ್ನು( lips)ಕತ್ತರಿಸಿ ಕತ್ತು ಹಿಸುಕಲು ಪ್ರಯತ್ನಿಸಿದ್ದು,ಅಜ್ಜಿಯ ದೇಹ ಮತ್ತು ಖಾಸಗಿ ಭಾಗಗಳಿಗೆ ಗಾಯಗಳಾಗಿವೆ ಎಂದು ಸ್ಲಂನ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದ್ದು, ಮನೆಯಲ್ಲಿ ವೃದ್ಧೆ ಮಲಗಿದ್ದ(Sleeping)ಸಂದರ್ಭ ಇದ್ದಕ್ಕಿದ್ದಂತೆ ಮನೆಗೆ ನುಗ್ಗಿದ ಆರೋಪಿ ಆಕಾಶ್( 28) ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ವೃದ್ಧೆಯ ತುಟಿ ಕೊಯ್ದು, ವೃದ್ಧೆಯ ಮುಖ, ಖಾಸಗಿ ಭಾಗಳಿಗೆ ಗಾಯ ಮಾಡಿರುವ ಹೇಯ ಕೃತ್ಯ ವರದಿಯಾಗಿದೆ. ವೃದ್ಧೆಯ ಖಾಸಗಿ ಅಂಗಗಳಿಗೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಿರುವ ಕುರಿತು ಖಾಸಗಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ ಎಂದು ತಿಳಿದುಬಂದಿದೆ.

 

ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಟ್ವಿಟರ್ ಖಾತೆಯಲ್ಲಿ ವೃದ್ಧೆಯ ಅತ್ಯಾಚಾರದ ಕುರಿತು ದೆಹಲಿ ಪೊಲೀಸರನ್ನು ಪ್ರಶ್ನಿಸಿ ಫೋಸ್ಟ್ ಹಾಕಿದ್ದರು. ಇದನ್ನು ಗಮನಿಸಿದ ಪೊಲೀಸರು ತನಿಖೆ ನಡೆಸಿ 28 ವರ್ಷದ ಆರೋಪಿ ಆಕಾಶ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

You may also like

Leave a Comment