Home » Delhi Temprature: ದೆಹಲಿಯಲ್ಲಿ ಇಂದು ಈ ಋತುವಿನ ಕನಿಷ್ಠ ತಾಪಮಾನ ದಾಖಲು – ವಾಯು ಗುಣಮಟ್ಟ ಹೇಗಿದೆ?

Delhi Temprature: ದೆಹಲಿಯಲ್ಲಿ ಇಂದು ಈ ಋತುವಿನ ಕನಿಷ್ಠ ತಾಪಮಾನ ದಾಖಲು – ವಾಯು ಗುಣಮಟ್ಟ ಹೇಗಿದೆ?

0 comments

Delhi Temprature: ಬುಧವಾರ ದೆಹಲಿಯಲ್ಲಿ ಕನಿಷ್ಠ ತಾಪಮಾನ 26.1°C ದಾಖಲಾಗಿದ್ದು, ಇದು ಈ ಋತುವಿನ ಅತ್ಯಂತ ಕಡಿಮೆ ತಾಪಮಾನವಾಗಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ. IMD ಪ್ರಕಾರ, ಈ ಋತುವಿನ ಸಾಮಾನ್ಯ ತಾಪಮಾನಕ್ಕಿಂತ ಈ ತಾಪಮಾನ 0.8°C ಕಡಿಮೆಯಾಗಿದೆ. ಅದೇ ಸಮಯದಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಬೆಳಿಗ್ಗೆ 9 ಗಂಟೆಗೆ 98ಕ್ಕೆ ದಾಖಲಾಗಿದ್ದು, ಇದು ತೃಪ್ತಿದಾಯಕವಾಗಿದೆ.

ದೆಹಲಿಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ರಾಜಧಾನಿಯಲ್ಲಿ ಬೆಳಿಗ್ಗೆ 8.30ಕ್ಕೆ ಶೇ. 80 ರಷ್ಟಿತ್ತು. ದೆಹಲಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ಶೂನ್ಯದಿಂದ 50 ರವರೆಗಿನ ವಾಯು ಗುಣಮಟ್ಟ ಸೂಚಕವನ್ನು ‘ಉತ್ತಮ’, 51 ರಿಂದ 100 ‘ತೃಪ್ತಿದಾಯಕ’, 101 ರಿಂದ 200 ‘ಮಧ್ಯಮ’, 201 ರಿಂದ 300 ‘ಕಳಪೆ’, 301 ರಿಂದ 400 ‘ತುಂಬಾ ಕಳಪೆ’ ಮತ್ತು 401 ರಿಂದ 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: RBI Governor: ಭಾರತಕ್ಕೆ ಉಜ್ವಲ ನಿರೀಕ್ಷೆಗಳಿವೆ – ಟ್ರಂಪ್‌ ಅವರ ‘ಸತ್ತ ಆರ್ಥಿಕತೆ’ ಟೀಕೆಗೆ ಆರ್‌ಬಿಐ ಗವರ್ನರ್ ತಿರುಗೇಟು

You may also like