Dengue fever: ಎಲ್ಲೆಡೆ ಡೆಂಘೀ ಜ್ವರಕ್ಕೆ (Dengue fever) ಸಾವಿರಾರು ಜನರ ಆರೋಗ್ಯ ಹದಗೆಡುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಡೆಂಘೀ ಪ್ರಕರಣಗಳ ಏರಿಕೆ ಬೆನ್ನಲ್ಲೆ, ಬಿಬಿಎಂಪಿ ಅಲರ್ಟ್ ಆಗಿದೆ. ಸದ್ಯ ಡೆಂಘೀ ಕಂಟ್ರೋಲ್ ಗೆ ಹರಸಾಹಸಪಡ್ತಿರೋ ಪಾಲಿಕೆ, ಇದೀಗ ಡೆಂಘೀ ನಿಯಂತ್ರಣಕ್ಕೆ ಹೊಸ ಪ್ಲಾನ್ ಮೊರೆಹೋಗಿದೆ. ಹೌದು ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಹೊಸ ನಿಯಮವನ್ನು ತರಲು ತಯಾರಿ ನಡೆಸಿದ್ದಾರೆ.
NEET: 2024ರ ನೀಟ್-ಯುಜಿ ಪರೀಕ್ಷೆ ರದ್ದು ?! ಕೇಂದ್ರ ಸರ್ಕಾರ ಹೇಳಿದ್ದೇನು?
ಇನ್ಮುಂದೆ ಮನೆ ಮುಂದೆ ನೀರು (Rain Water) ನಿಂತರೆ, ಕಸ ಹಾಕಿರೋ ಜಾಗದಲ್ಲಿ ಸೊಳ್ಳೆ ಉತ್ಪತಿಯಾಗ್ತಿದ್ರೆ ಅಂತಾ ಜಾಗದ ಮಾಲೀಕರ ಮೇಲೆ ದಂಡ ಹಾಕಲು ಪಾಲಿಕೆ (BBMP) ಮುಂದಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಕುವವರಿಗೆ ಬಿಸಿ ಮುಟ್ಟಿಸಲು ಹೊರಟಿರೋ ಪಾಲಿಕೆ, ಬರೋಬ್ಬರಿ 500 ರೂಪಾಯಿ ದಂಡ ಹಾಕೋಕೆ ತಯಾರಿ ನಡೆಸಿದೆ.
ಖಾಸಗಿ ಜಾಗಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತಿಯಾಗುವ ಜಾಗ ಹಾಗೂ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಬಿಸಿಮುಟ್ಟಿಸಲು ಹೊರಟಿರೋ ಪಾಲಿಕೆ, ಎಲ್ಲೆಂದರಲ್ಲಿ ಕಸ ಎಸೆದ್ರೆ, ನೀರು ನಿಂತು ಸೊಳ್ಳೆ ಬಂದ್ರೆ ಅಂತವರಿಗೆ ದಂಡ ವಿಧಿಸಲು ಮುಂದಾಗಿದೆ.
ಈ ಕುರಿತು ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಹಿಂದೆ ಮುನ್ಸಿಪಲ್ ಕಾಯ್ದೆ ಪ್ರಕಾರ ಅಶುಚಿತ್ವಕ್ಕೆ 50 ರೂಪಾಯಿ ದಂಡ ವಿಧಿಸುವ ಅವಕಾಶವಿತ್ತು, ಆದರೆ ಇದೀಗ ಆ ದಂಡದ ಮೊತ್ತವನ್ನ 500 ರೂಪಾಯಿಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಏರಿಯಾಗಳು, ಮನೆಗಳು, ಖಾಸಗಿ ಜಾಗಗಳಲ್ಲಿ ಅಶುಚಿತ್ವ ಕಂಡುಬಂದ್ರೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುತ್ತೆ, ದಂಡದ ಬಳಿಕವೂ ಶುಚಿತ್ವ ಕಾಪಾಡದಿದ್ರೆ ಪ್ರತಿನಿತ್ಯ 15 ರೂ. ದಂಡ ವಿಧಿಸೋಕೆ ಪಾಲಿಕೆ ಪ್ರಸ್ತಾವನೆ ಇಟ್ಟಿದೆ. ಸದ್ಯ ಕಾನೂನಿನ ಪ್ರಕಾರ 50 ರೂಪಾಯಿಯಷ್ಟೇ ದಂಡ ವಿಧಿಸಲು ಅವಕಾಶವಿದೆ.ಆದರೆ ಪಾಲಿಕೆಯ ಈ ನಿರ್ಧಾರಕ್ಕೆ ಸಾರ್ವಜನಿಕರು ಕೆಂಡವಾಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡೋದನ್ನೇ ಮರೆತಿರೋ ಪಾಲಿಕೆ, ಇದೀಗ ಜನಸಾಮಾನ್ಯರ ಮೇಲೆ ದಂಡ ಹಾಕಲು ಹೊರಟಿರೋದಕ್ಕೆ ಸಿಟಿ ಮಂದಿ ಆಕ್ರೋಶ ಹೊರಹಾಕ್ತಿದ್ದಾರೆ. ಡೆಂಘೀಯನ್ನೂ ಪಾಲಿಕೆ ಬಂಡವಾಳ ಮಾಡಿಕೊಂಡು ದಂಡದ ಮೂಲಕ ಖಜಾನೆ ತುಂಬಿಸಲು ಹೊರಟಿದೆ ಎನ್ನುತ್ತಿದ್ದಾರೆ ಜನರು. ಸದ್ಯ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ದಂಡದ ಮೊತ್ತ ಹೆಚ್ಚಿಸಲು ನೀಡಿರೋ ಪ್ರಸ್ತಾವನೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
