Home » Dengue Reels: ರೀಲ್ಸ್ ಪ್ರಿಯರಿಗೆ ಭರ್ಜರಿ ಆಫರ್! ಡೆಂಘೀ ಬಗ್ಗೆ ರೀಲ್ಸ್ ಮಾಡಿ ಲಕ್ಷ ಬಹುಮಾನ ಗೆಲ್ಲಿ!

Dengue Reels: ರೀಲ್ಸ್ ಪ್ರಿಯರಿಗೆ ಭರ್ಜರಿ ಆಫರ್! ಡೆಂಘೀ ಬಗ್ಗೆ ರೀಲ್ಸ್ ಮಾಡಿ ಲಕ್ಷ ಬಹುಮಾನ ಗೆಲ್ಲಿ!

4 comments
Dengue Reels

Dengue Reels: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಏರಿಕೆ ಕಾಣುತ್ತಿವೆ. ಡೆಂಘೀ ಜ್ವರಕ್ಕೆ (Dengue fever) ಸಾವಿರಾರು ಜನರ ಆರೋಗ್ಯ ಹದಗೆಡುತ್ತಿದೆ. ಅಲ್ಲದೆ ಸಿಲಿಕಾನ್ ಸಿಟಿಯಲ್ಲಿ ಡೆಂಘೀ ಪ್ರಕರಣಗಳ ಏರಿಕೆಯಾಗಿದ್ದು ಬಿಬಿಎಂಪಿ ಅಲರ್ಟ್ ಆಗಿದೆ. ಸದ್ಯ ಡೆಂಘೀ ಕಂಟ್ರೋಲ್ ಗೆ ಹರಸಾಹಸಪಡ್ತಿರೋ ಪಾಲಿಕೆ, ಡೆಂಘೀಗೆ ಕಡಿವಾಣ ಹಾಕಲು ಮನೆ ಮನೆ ಸರ್ವೇ ಮಾಡುತ್ತೇವೆ ಎಂದು ಹೊರಟಿದ್ದ ಬಿಬಿಎಂಪಿ, ಇದೀಗ ಇದರ ಜೊತೆಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲು ಮುಂದಾಗಿದೆ, ಈ ಹಿನ್ನೆಲೆ ರೀಲ್ಸ್ (Dengue Reels) ಪ್ರಿಯರಿಗೆ ಬಿಬಿಎಂಪಿ ಭರ್ಜರಿ ಆಫರ್‌ ನೀಡಿದ್ದು, ರೀಲ್ಸ್ ಮಾಡಿ ಒಂದು ಲಕ್ಷಾ ಗೆಲ್ಲಿ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ಆಹ್ವಾನಿಸಿಸಿದೆ.

ಹೌದು, ಸೋಷಿಯಲ್ ಮೀಡಿಯಾದಲ್ಲಿ ಡೆಂಘೀ ಕುರಿತ ರೀಲ್ಸ್ ಗಳನ್ನು ಆಹ್ವಾನಿಸಿರುವ ಪಾಲಿಕೆ, ಮೊದಲ ಐದು ಉತ್ತಮ ರೀಲ್ಸ್‌ಗಳಿಗೆ ತಲಾ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದೆ. ಇನ್ನು ದ್ವೀತಿಯ ಬಹುಮಾನದಲ್ಲಿ ಐದು ಜನರಿಗೆ ತಲಾ 10 ಸಾವಿರ ರೂಪಾಯಿ ನಿಗದಿ ಮಾಡಿದೆ. ಇನ್ನು ವಿಶೇಷವಾಗಿ ಶಾಲಾ ಮಕ್ಕಳಿಗೂ ಬಿಬಿಎಂಪಿ ಬಂಪರ್ ಆಫರ್ ಕೊಟ್ಟಿದ್ದು, ಯಾವ ಶಾಲೆ ಹೆಚ್ಚು ವಿದ್ಯಾರ್ಥಿಗಳ ಬಳಿ ರೀಲ್ಸ್ ಮಾಡಿಸುತ್ತದೆಯೋ ಆ ಶಾಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.

Karnataka Assembly: ನಯನಾ ಮೋಟಮ್ಮಗೆ ಟಾಂಗ್- ‘ಏನಿಲ್ಲಾ ಏನಿಲ್ಲಾ ಮೂಡಿಗೆರೆಗೇ ಏನಿಲ್ಲಾ… ಏನೇನಿಲ್ಲಾ’ ಎಂದು ಸದನಲ್ಲಿ ಹಾಡು ಹೇಳಿದ ಬಿಜೆಪಿ ಶಾಸಕರು !!

ಅಲ್ಲದೇ ಮಕ್ಕಳಿಗೆ ಜಾಗೃತಿ ಮೂಡಿಸುವ ವಿಡಿಯೋ ಮಾಡಲು ಉತ್ತೇಜಿಸೋ ಶಿಕ್ಷಕಿಯರಿಗೂ 35 ಸಾವಿರ ರೂಪಾಯಿ ಬಹುಮಾನದ ಆಫರ್ ಕೊಟ್ಟಿದೆ. ಡೆಂಘೀ ಜಾಗೃತಿ ಸಂಬಂಧ ರೀಲ್ಸ್ ಮಾಡಿದ ನಂತರ ಅದನ್ನು ಬಿಬಿಎಂಪಿ ಆರೋಗ್ಯ ಇಲಾಖೆ  ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಬೇಕು. ಯಾವ ರೀಲ್ಸ್ ಹೆಚ್ಚು ವೀಕ್ಷಣೆ ಪಡೆಯುತ್ತದೆ. ಹೆಚ್ಚು ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿದೆಯೋ ಅದನ್ನು ಆಧರಿಸಿ ಬಹುಮಾನ ಬಿಬಿಎಂಪಿ ಬಹುಮಾನ ನೀಡಲಿದೆ ಎನ್ನಲಾಗಿದೆ. ಮುಖ್ಯವಾಗಿ ಈ ರೀಲ್ಸ್ ಸ್ಪರ್ಧೆಗೆ ಸೋಷಿಯಲ್ ಮೀಡಿಯಾ ಬಳಸಿಕೊಳ್ಳುತ್ತಿರುವ ಪಾಲಿಕೆಯ ಆರೋಗ್ಯ ವಿಭಾಗ, ರೀಲ್ಸ್ ಹಂಚಿಕೊಂಡ ಪ್ರತಿಯೊಬ್ಬರಿಗೂ ಡೆಂಘೀ ವಾರಿಯರ್ ಎಂಬ ಪಟ್ಟ ನೀಡುತ್ತದೆ.

ಆದ್ರೆ ಬಿಬಿಎಂಪಿಯ ಈ ರೀಲ್ಸ್ ಕಾಂಪಿಟೇಷನ್‌ಗೆ ಸಾರ್ವಜನಿಕರಿಂದ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಪಾಲಿಕೆ ಡೆಂಘೀ ಬಗ್ಗೆ ಅರಿವು ಮೂಡಿಸಲು ಹೊರಟಿರುವುದು ಸರಿ. ಆದರೆ ನಗರದಲ್ಲಿ ಸರಿಯಾಗಿ ಸ್ವಚ್ಛತೆಯನ್ನು ಕಾಪಾಡಬೇಕು, ಜೊತೆಗೆ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮವನ್ನು ಕೈಗೊಳ್ಳಬೇಕು ಎಂದಿದ್ದಾರೆ.

 

You may also like

Leave a Comment