Home » ದಲಿತ ಮಹಿಳೆಗೆ ದೇವಸ್ಥಾನದಲ್ಲಿ ಪ್ರಾರ್ಥನೆಗೆ ತಡೆ| ಮಹಿಳೆಯ ಸುತ್ತುವರಿದು ತಡೆಯೊಡ್ಡಿದ್ದ 20 ಅರ್ಚಕರ ವಿರುದ್ಧ ದೂರು ದಾಖಲು

ದಲಿತ ಮಹಿಳೆಗೆ ದೇವಸ್ಥಾನದಲ್ಲಿ ಪ್ರಾರ್ಥನೆಗೆ ತಡೆ| ಮಹಿಳೆಯ ಸುತ್ತುವರಿದು ತಡೆಯೊಡ್ಡಿದ್ದ 20 ಅರ್ಚಕರ ವಿರುದ್ಧ ದೂರು ದಾಖಲು

0 comments

ಪರಿಶಿಷ್ಟ ಜಾತಿಯ ಮಹಿಳೆಯೋರ್ವರು ಪ್ರಾರ್ಥನೆ ಸಲ್ಲಿಸುವುದಕ್ಕೆಂದು ದೇವಸ್ಥಾನಕ್ಕೆ ಹೋದಾಗ ತಡೆಯೊಡ್ಡಿದ್ದ ಘಟನೆಯೊಂದು ನಡೆದಿದೆ.

ತಮಿಳುನಾಡಿನ ಚಿದಂಬರಂ ನಟರಾಜ ದೇವಾಲಯದಲ್ಲಿ ಈ ಘಟನೆ ಫೆ.15 ರಂದು ನಡೆದಿದೆ. ಪರಿಶಿಷ್ಟ ಮಹಿಳೆಯೋರ್ವರು ಪ್ರಾರ್ಥನೆ ಸಲ್ಲಿಸುವುದಕ್ಕೆ ತಡೆಯೊಡ್ಡಿದ್ದ ದೇವಾಲಯದ 20 ಮಂದಿ ಅರ್ಚಕರ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ‌.

ಜಯಶೀಲಾ ಎಂಬುವವರು ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದಂತೆ ಅರ್ಚಕರು ಸುತ್ತುವರಿದು ನಿಂದಿಸಲು ಆರಂಭಿಸಿದ್ದಾರೆ. ಮಹಿಳೆಯ ಕೈ ಹಿಡಿದು ಅರ್ಚಕರು ಎಳೆಯುತ್ತಿರುವ ದೃಶ್ಯವು ವೀಡಿಯೋದಲ್ಲಿ ಸೆರೆಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಜಯಶೀಲಾ ಅವರು ನೀಡಿದ ದೂರಿನನ್ವಯ ದೂರು ದಾಖಲಾಗಿದೆ.

ಇತ್ತ ಕಡೆ ಜಯಶೀಲಾ ಅವರು ದೇವಾಲಯದ ಪಾತ್ರೆಗಳನ್ನು ಕಳವುಗೈದಿದ್ದಾರೆ ಎಂದು ಅರ್ಚಕರು ಆರೋಪ ಮಾಡಿದ್ದಾರೆ. ಜಯಶೀಲಾ ಅವರು ತಮಗೆ ಅರ್ಚಕರು ಬೆದರಿಕೆ ಒಡ್ಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

You may also like

Leave a Comment