Bengaluru: ಒಂದೆರಡು ಸಿನಿಮಾಗಳನ್ನು ಮಾಡಿದ ತಕ್ಷಣ ತಮ್ಮನ್ನು ತಾವು ಸ್ಟಾರ್ ನಟರಿಗಿಂತ ಮೇಲೆ ಎಂದು ದರ್ಪ ತೋರುವುದು ಇತ್ತೀಚೆಗೆ ಕಾಮನ್ ಆಗಿಬಿಟ್ಟಿದೆ. ಚಿತ್ರರಂಗ ಎಂದಾಗ ಎಲ್ಲರೂ ಒಟ್ಟಾಗಿ ಸಾಧನೆ ಮಾಡಿದರೆ ಅದಕ್ಕೊಂದು ಶೋಭೆ. ಆದರೆ ಒಂದು ಸಿನಿಮಾ ತೆರೆ ಮೇಲೆ ಕಾಣಿಸಿಬಿಟ್ಟರೆ ಸಾಕು ಕಾಲುಗಳು ನೆಲದ ಮೇಲೆ ನಿಲ್ಲೋದಿಕ್ಕು ಹಿಂದೆ ಮುಂದೆ ನೋಡೋ ಪರಿಸ್ಥಿತಿ ಇಂದಿನವರದು.
ಹೌದು, ಒಂದು ವಾರದಿಂದ ಸುದ್ದಿಯಲ್ಲಿರುವ ಮಡೆನೂರು ಮನು ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಅವರ ಮೇಲಿನ ಹಲವಾರು ಆರೋಪಗಳ ನಡುವೆ ಇದೀಗ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ.
ಈ ಮಡೆನೂರು ಅರೆಸ್ಟ್ ಆದ ಬಳಿಕ ಒಂದು ಆಡಿಯೋ ವೈರಲ್ ಆಗಿದ್ದು, ಅವರು ಸ್ಟಾರ್ ನಟರಾದಂತಹ ದರ್ಶನ್, ಶಿವರಾಜ್ ಕುಮಾರ್ ಹಾಗೂ ಧ್ರುವ ಸರ್ಜಾ ಬಗ್ಗೆ ಆ ಆಡಿಯೋ Shift ಅವಹೇಳನಕಾರಿಯಾಗಿ ಮಾತಾನಾಡಿದ್ದು, ಈ ಬೆನ್ನಲ್ಲೇ ಶಿವಣ್ಣನ ದೂರು ನೀಡಿದ್ದು, ಹಾಗಾಗಿ ಫೀಲ್ಮ್ ಚೆOಬರ್ ಒಂದು ಮಹತ್ವದ ನಿರ್ಧಾರ ಕೈ ಗೊಂಡಿದೆ.
ಆರೋಪದ ಬೆನ್ನಲ್ಲೇ ಮನು ಅವರನ್ನು ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ಬ್ಯಾನ್ ಮಾಡಿದ್ದು, ಈತನ ವಿರುದ್ಧ ವಾಣಿಜ್ಯ ಮಂಡಳಿಯೂ ದೂರು ನೀಡುವುದಾಗಿ ತಿಳಿಸಿದೆ.
