Home » Farah Khan: ಹೋಳಿ ಹಬ್ಬದ ಕುರಿತು ಅವಹೇಳನಕಾರಿ ಹೇಳಿಕೆ; ಫರಾಖಾನ್‌ ವಿರುದ್ಧ FIR

Farah Khan: ಹೋಳಿ ಹಬ್ಬದ ಕುರಿತು ಅವಹೇಳನಕಾರಿ ಹೇಳಿಕೆ; ಫರಾಖಾನ್‌ ವಿರುದ್ಧ FIR

0 comments

Farah Khan: ಬಾಲಿವುಡ್‌ ನಿರ್ದೇಶಕಿ ನೃತ್ಯ ಸಂಯೋಜಕಿ ಫರಾ ಖಾನ್‌ ಅವರು ಹೋಳಿ ಹಬ್ಬದ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ʼಸೆಲೆಬ್ರಿಟಿ ಮಾಸ್ಟರ್‌ ಶೆಫ್‌ʼ ಕಾರ್ಯಕ್ರಮದಲ್ಲಿ ಹೋಳಿ ಹಬ್ಬವನ್ನು “ಚಾಪ್ರಿಗಳ ಹಬ್ಬ” ಎಂದು ಹೇಳಿದ್ದರು ಎನ್ನುವುದನ್ನು ದೂರಿನ ಸಂದರ್ಭ ಉಲ್ಲೇಖ ಮಾಡಲಾಗಿದೆ.

ಫರಾಖಾನ್‌ ಅವರ ಈ ಹೇಳಿಕೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರು ನೀಡಿದ ಹಿಂದೂಸ್ತಾನಿ ಭಾವು ಎಂದು ಖ್ಯಾತಿ ಪಡೆದಿರುವ ವಿಕಾಶ್‌ ಘಟಕ್‌ ತಮ್ಮ ವಕೀಲರ ಮೂಲಕ ದೂರಿನಲ್ಲಿ ಉಲ್ಲೇಖ ಮಾಡಿದ್ದು, ಖಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಫರಾಖಾನ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 196, 299, 302, ಮತ್ತು 353 ಅಡಿಯಲ್ಲಿ ದೂರು ದಾಖಲಾಗಿದೆ. ಫರಾಖಾನ್‌ ನೀಡಿರುವ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

You may also like