Home » Drunk and Drive : ಚಿತ್ರದುರ್ಗ ದುರಂತವಾದ್ರೂ ನೆಗ್ಲೆಟ್ – ಡ್ರಿಂಕ್‌ ಅಂಡ್‌ ಡ್ರೈವ್‌ ಮಾಡಿ ಸಿಕ್ಕಿಬಿದ್ದ ಸೀಬರ್ಡ್‌ ಬಸ್‌ ಚಾಲಕ!

Drunk and Drive : ಚಿತ್ರದುರ್ಗ ದುರಂತವಾದ್ರೂ ನೆಗ್ಲೆಟ್ – ಡ್ರಿಂಕ್‌ ಅಂಡ್‌ ಡ್ರೈವ್‌ ಮಾಡಿ ಸಿಕ್ಕಿಬಿದ್ದ ಸೀಬರ್ಡ್‌ ಬಸ್‌ ಚಾಲಕ!

0 comments

Drunk and Drive: ಚಿತ್ರದುರ್ಗ ಬಳಿಯ ಹಿರಿಯೂರು ಬಳಿ ನಡೆದ ಸ್ಲೀಪರ್ ಬಸ್ ದುರಂತ ಇಡೀ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಈ ದುರ್ಘಟನೆಯಲ್ಲಿ 6 ಮಂದಿ ಸಜೀವ ದಹನಗೊಂಡಿದ್ದು, ಇದೀಗ ಸಾವಿನ ಸಂಖ್ಯೆ 7ಕ್ಕೆ ಏರಿಕೆ ಆಗಿದೆ. ಇಂತಹ ದುರಂತವಾದರೂ ಕೂಡ ಸೀಬರ್ಡ್ ಬಸ್ ಕಂಪನಿಯು ಎಚ್ಚೆತ್ತುಕೊಂಡಿಲ್ಲ. ಯಾಕೆಂದರೆ ಇದೀಗ ಅದೇ ಕಂಪನಿಯ ಬಸ್ ಡ್ರೈವರ್ ಡ್ರಿಂಕ್ ಅಂಡ್ ಡ್ರೈವ್ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹೌದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಡೆದ ಸೀ ಬರ್ಡ್ ಬಸ್ ದುರಂತದ ಬೆನ್ನಲ್ಲೇ, ಅದೇ ಕಂಪನಿಯ ಮತ್ತೊಬ್ಬ ಚಾಲಕನ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವಂತಹ ಈ ಘಟನೆ ಬೆಂಗಳೂರಿನಲ್ಲಿ ( Bengaluru) ನಡೆದಿದೆ. ಮದ್ಯಪಾನ ಮಾಡಿ ಬಸ್​ ಚಲಾಯಿಸುತ್ತಿದ್ದ ಸೀ ಬರ್ಡ್ ಚಾಲಕ ಪೊಲೀಸರ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಪ್ರಯಾಣಿಕರಿದ್ರೂ ಕುಡಿದು ಬಸ್ ಓಡಿಸ್ತಾ ಇದ್ದ ಚಾಲಕ ದಿವಾಕರ್ ಬೇಜವಾಬ್ದಾರಿ ವರ್ತನೆ ಕಂಡು ಪೊಲೀಸರು ಹಾಗೂ ಪ್ರಯಾಣಿಕರು ಶಾಕ್ ಆಗಿದ್ದಾರೆ.

ಯಸ್, ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಖಾಸಗಿ ಸೀ ಬರ್ಡ್ ಬಸ್ ಅನ್ನು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಚಾಲಕ, ಉಪ್ಪಾರಪೇಟೆ ಸಂಚಾರಿ ಪೊಲೀಸರ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ತೀವ್ರ ತಪಾಸಣೆ ನಡೆಯುತ್ತಿದ್ದ ವೇಳೆ, ಅನುಮಾನಾಸ್ಪದವಾಗಿ ಬಸ್ ತಡೆಯಲಾಯಿತು. ತಪಾಸಣೆಯಲ್ಲಿ ಚಾಲಕ ಮದ್ಯಪಾನ ಮಾಡಿರುವುದು ದೃಢಪಟ್ಟ ಕೂಡಲೇ, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡರು.

You may also like