Nandini: ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣಿಯನ್ನು ನಡೆಸಿದ್ದು, ಹಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದ ಬ್ರಾಂಡ್ ನಂದಿನಿ ಕೂಡ ತನ್ನ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಆದರೆ ಹಾಲಿನ ದರವನ್ನು ಮಾತ್ರ ಸಂಸ್ಥೆ ಇಳಿಸಿಲ್ಲ. ಯಾಕಾಗಿ ಗೊತ್ತಾ? ಇಲ್ಲಿದೆ ನೋಡಿ ಕೆಎಂಎಫ್ ಕುಟ್ಟ ಸ್ಪಷ್ಟೀಕರಣ.
ಹೌದು, ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ್ದು, ಹಾಲು, ಮೊಸಲು ಹೊರಟು ಪಡಿಸಿ ಉಳಿದ ಉತ್ಪನ್ನ ಬೆಲೆ ಇಳಿಕೆ ಯಾಗಿದೆ. ಕೇಂದ್ರ ಸರ್ಕಾರ ಏನು ಸೂಚನೆ ನೀಡಿದೆಯೋ, ಅದೇ ಪ್ರಕಾರವಾಗಿ ಮಾರಾಟ ಮಾಡುತ್ತಿದ್ದೇವೆ ಎಂದರು.
ಅಲ್ಲದೆ ಜಿಎಸ್‌ಟಿ ದರ ಕಡಿಮೆಯಾಗಿರುವುದರಿಂದ ಉತ್ಪನ್ನಗಳ ಬೆಲೆ ಸಹ ಇಳಿಕೆ ಆಗಿದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವ ಜವಾಬ್ದಾರಿಯನ್ನು ಕೆಎಂಎಫ್ ಹೊತ್ತುಕೊಂಡಿದೆ. ಯಾವುದಾದರೂ ದೂರು ಬಂದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಎಂಆರ್‌ಪಿ ಏನೇ ಇರಲಿ, ನಾವು ಜಿಎಸ್‌ಟಿ ಕಡಿತಗೊಂಡ ದರದ ಆಧಾರದ ಮೇಲೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
