Home » Pramod Muthalik: ಹಿಂದೂ ಧರ್ಮದ ನಾಶವೇ ಮುಸ್ಲಿಮರ ಉದ್ದೇಶ: ಪ್ರಮೋದ್‌ ಮುತಾಲಿಕ್

Pramod Muthalik: ಹಿಂದೂ ಧರ್ಮದ ನಾಶವೇ ಮುಸ್ಲಿಮರ ಉದ್ದೇಶ: ಪ್ರಮೋದ್‌ ಮುತಾಲಿಕ್

0 comments
Pramod Muthalik

Pramod Muthalik: ಹಿಂದೂ ಧರ್ಮವನ್ನು ನಾಶಮಾಡುವುದೇ ಮುಸ್ಲಿಮರ ಉದ್ದೇಶವಾಗಿದ್ದು, ಈ ಕಾರಣಕ್ಕಾಗಿ ಲವ್‌ ಜಿಹಾದ್‌ ಪ್ರಕರಣ ಹೆಚ್ಚು ಮಾಡಲು ತನ್ನ ಜನಾಂಗದ ಪ್ರತಿಯೊಬ್ಬರನ್ನು ಪ್ರೋತ್ಸಾಹ ಮಾಡುತ್ತಿದ್ದಾರೆ ಎಂದು ಕೊಟ್ಟೂರು ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಸಮಗ್ರ ಭಾರತ ರಾಷ್ಟ್ರ ತುಂಡಾಗಿ ಪಾಕಿಸ್ತಾನ ನಿರ್ಮಾಣವಾಯಿತು. ಈಗ ಈ ರಾಷ್ಟ್ರದಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್‌ ಮತ್ತಿತರ ಸೋಕಾಲ್ಡ್‌ ಪಕ್ಷಗಳು ಬೆಂಬಲವಾಗಿ ಸಾಗಿರುವುದು ದೊಡ್ಡ ದುರಂತ ಎಂದು ಹೇಳಿದರು.

ಪ್ರತಿ ಮಹಿಳೆ ತಮ್ಮ ಸುರಕ್ಷತೆಗೆ ತಮ್ಮ ಬ್ಯಾಗಿನಲ್ಲಿ ತ್ರಿಶೂಲದ ಆಯುಧವನ್ನು ಇಡಬೇಕು. ಮುಸ್ಲಿಮರ ಹಿತ ಚಿಂತಕ ಕಾಂಗ್ರೆಸ್‌ ಸರಕಾರದಿಂದ ಮಹಿಳೆಯರ ರಕ್ಷಣೆಯಾಗದು ಎಂದು ಮುತಾಲಿಕ್‌ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಸ್.‌ ತಿಂದಪ್ಪ, ಶ್ರೀರಾಮ ಸೇನೆಯ ಸ್ಥಳೀಯ ಮುಖಂಡ ಡಾ.ರಾಕೇಶ್‌ ಮತ್ತಿರರಿದ್ದರು.

You may also like