Home » ದೇವಸ್ಯ : ಹಳೆಯ ಸೇತುವೆಗೆ ಹಾನಿ, ವಾಹನ ಸಂಚಾರ ನಿರ್ಬಂಧ

ದೇವಸ್ಯ : ಹಳೆಯ ಸೇತುವೆಗೆ ಹಾನಿ, ವಾಹನ ಸಂಚಾರ ನಿರ್ಬಂಧ

by Praveen Chennavara
0 comments

ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಬೆಳಿಯೂರು ಕಟ್ಟೆ ಸಮೀಪದ ದೇವಸ್ಯ ಎಂಬಲ್ಲಿ ಹಳೆಯ ಸೇತುವೆಗೆ ಹಾನಿಯಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಸದರಿ ಸೇತುವೆಯ ಮೇಲೆ ಎಲ್ಲಾ ವಾಹನಗಳನ್ನು ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹೊಸ ಸೇತುವೆಯ ಸಂಪರ್ಕ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಮೂರು ದಿನಗಳ ಒಳಗಾಗಿ ಸಂಚಾರವನ್ನು ಮರುಸ್ಥಾಪಿಸಲು ಕ್ರಮವಹಿಸಲಾಗಿದೆ.

ಸಾರ್ವಜನಿಕರು ಸಹಕರಿಸುವಂತೆ
ಲೋಕೋಪಯೋಗಿ ಇಲಾಖೆ ಪುತ್ತೂರು ಉಪ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

You may also like

Leave a Comment