Tirupati: ದೇಶದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿರುವುದು ತಿರುಪತಿ(Tirupati) ತಿಮ್ಮಪ್ಪನ ದೇವಸ್ಥಾನ. ದಿನನಿತ್ಯ ಲಕ್ಷಾಂತರ ಭಕ್ತಾದಿಗಳು ದಿನನಿತ್ಯ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಹೀಗಿರುವಾಗ ಇಂದು ತಿರುಪತಿ ದೇವಳದಲ್ಲಿ ಚಮತ್ಕಾರವೊಂದು ನಡೆದಿದೆ. ದರ್ಶನ ಪಡೆಯುವ ವೇಳೆ ಇದನ್ನು ಕಂಡು ಭಕ್ತಾದಿಗಳೆಲ್ಲರೂ ಮೂಕ ವಿಸ್ಮಿತರಾಗಿದ್ದಾರೆ.
ಇಂತಹ ಒಂದು ಘಟನೆ ಇದೂವರೆಗೂ ತಿರುಪತಿ ದೇವಳದಲ್ಲಿ ನಡೆದಿಲ್ಲವಂತೆ. ಅದೇನೆಂದರೆ ಲಕ್ಷಾಂತರ ಭಕ್ತರು ಶ್ರೀ ಸ್ವಾಮಿಯ ದರ್ಶನ ಪಡೆಯುವಾಗ, ಮಂಗಳಾರತಿ ವೇಳೆ ತಿರುಪತಿಯ ವಾಸಿ ಶ್ರಿ ತಿರುಮಲೇಶನು ಮುಗುಳ್ನಕ್ಕಿದ್ದಾನೆ. ಈ ಅದ್ಭುತ ದೃಶ್ಯವೊಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಕಣ್ತುಂಬಿಕೊಕೊಂಡ ಜನರು, ಭಕ್ತಾಭಿಮಾನಿಗಳು ಭಾವಪರವಶರಾಗುತ್ತಿದ್ದಾರೆ.

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಬಾಲಾಜಿಗೆ ಮಂಗಳಾರತಿ ನಡೆಯುತ್ತಿದೆ. ಈ ವೇಳೆ ಸ್ವಾಮಿಯು ಒಮ್ಮೆಗೆ ಮುಗುಳ್ನಗುತ್ತಾನೆ. ಇದನ್ನು ಕಂಡರೆ ಸಾಕ್ಷಾತ್ ವೈಕುಂಠವಾಸಿಯೇ ಎದುರು ನಿಂತಂತೆ ಕಾಣುತ್ತದೆ. ಸ್ವಾಮಿಯನ್ನು ಕಂಡ ಭಕ್ತರು ಜಯಘೋಶಗಳನ್ನು ಹಾಕಿದ್ದಾರೆ. ನೋಡುಗರು ಎಂತವರು ಕೂಡ ಒಮ್ಮೆ ಮೈ ಮರೆಯುತ್ತಾರೆ. ಪೂಜೆಯ ವೇಳೆ ಯಾರೋ ಒಬ್ಬರು ಭಕ್ತರು ಮಾಡಿದ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ಇನ್ನು ತಿರುಪತಿ ತಿಮ್ಮಪ್ಪನ ಲೀಲೆಗಳ ಬಗ್ಗೆ, ಪವಾಡಗಳ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಆದರೆ ಈ ರೀತಿ ಸ್ವಾಮಿ ಮುಗುಳ್ನಕ್ಕಿದ್ದು ಇದೇ ಮೊದಲ ಬಾರಿಯಂತೆ. ಮಂಗಳಾರತಿಯ ಪ್ರಭೆ ಸ್ವಾಮಿಯ ಮುಖದ ಮೇಲೆ ಬಿದ್ದಕೂಡಲೇ ಆತ ಮಂದಸ್ಮಿತನಾಗುವುದು ಎಂಥವರನ್ನು ಪುಳಕಮಾಡುತ್ತದೆ.
https://fb.watch/nIOWACSqmj/?mibextid=2Rb1fB
ಇದನ್ನು ಓದಿ: Snake Found In Autorickshaw: ಹೆಡೆ ಬಿಚ್ಚಿಕೊಂಡೇ ಆಟೋ ಹಿಂದೆ ಸಾಗಿದ ನಾಗರಹಾವು – ವೈರಲ್ ಆಯ್ತು ಭಯಾನಕ ವಿಡಿಯೋ
