ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಅವರ ಸರಸ ವಿಡಿಯೋ ವೈರಲ್ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ವರದಿ ನೀಡುವಂತೆ ಆದೇಶ ನೀಡಿದ್ದಾರೆ. ಘಟನೆಯ ಕುರಿತು ವಿವರವಾದ ಮಾಹಿತಿ ನೀಡುವಂತೆ ಕೇಳಿದ್ದಾರೆ ಎನ್ನಲಾಗಿರುವ ಕುರಿತು ಎಂದು ವರದಿಯಾಗಿದೆ
‘ಜವಾಬ್ದಾರಿಯತ ಸ್ಥಾನದಲ್ಲಿರುವ, ಪೊಲೀಸ್ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಮಾಡೋವಂಥ ಕೆಲಸವೇನ್ರಿ ಇದು. ಪರ್ಸನಲ್ ಏನಾದರೂ ಇದ್ದರೆ ಬೇರೆ ಜಾಗದಲ್ಲಿ ಇಟ್ಕೋಬೇಕು. ಮನೆಯಲ್ಲಿ ಇಟ್ಕೋಬೇಕು. ಕಚೇರಿಯಲ್ಲಿ ಎಂಥದ್ದಿದು. ಅದೂ ಯೂನಿಫಾರ್ಮ್ ಹಾಕೊಂಡು ಈ ರೀತಿ ಮಾಡಿದ್ದಾರೆ’ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ ಎನ್ನಲಾಗಿದೆ.



