Sameer MD: ಧರ್ಮಸ್ಥಳದ ತಲೆ ಬುರುಡೆ ಪ್ರಕರಣ ಇಡೀ ದೇಶಾದ್ಯಂತ ಸಂಚಲನವನ್ನು ಸೃಷ್ಟಿಸುತ್ತಿದೆ. ದಿನದಿಂದ ದಿನಕ್ಕೆ ಈ ಪ್ರಕರಣ ತಿರುಗು ಪಡೆದುಕೊಳ್ಳುತ್ತಿದ್ದು ಯಾವುದು ನಿಜ ಯಾವುದು ಸುಳ್ಳು ಎಂಬುದನ್ನು ನಂಬದಂತಾಗಿದೆ. ಎಲ್ಲದಕ್ಕೂ ಮುಖ್ಯವಾಗಿ ಈ ಒಂದು ಪ್ರಕರಣ ಇಷ್ಟು ಪ್ರಕರವಾಗಿ ಕಾವೇರಲು ಕಾರಣವಾದದ್ದು ಸಮೀರ್ ಎಂಡಿ ಎಂಬ ಯುಟ್ಯೂಬರ್.
ಹೌದು ಯೂಟ್ಯೂಬರ್ ಸಮೀರ್ ಮಾಡಿದ ಧರ್ಮಸ್ಥಳದ ಬುರುಡೆ ಪ್ರಕರಣದ ವಿಡಿಯೋ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿ, ಸಾಕಷ್ಟು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮೀರ್ ಮೇಲೆ ಪ್ರಕರಣ ಕೂಡ ದಾಖಲಾಗಿದ್ದು ಅವರು ಜಾಮೀನು ಪಡೆದು ಆದರಿಂದ ಮುಕ್ತಾರಾದರು. ಆದರೆ ಎಸ್ಐಟಿ ಮಾತ್ರ ಅವರನ್ನು ಬಿಡದೆ ಕರೆಸಿ ವಿಚಾರಣೆ ನಡೆಸಿ ಡ್ರಿಲ್ ಮಾಡಿತು. ಈ ವೇಳೆ ಆತ ಜನರು ಮಾತನಾಡುವ ವಿಚಾರಗಳನ್ನು ತಾನು ವಿಡಿಯೋ ಮಾಡಿ ಹಾಕಿದ್ದೇನೆ ಎಂದು ಸ್ವತಃ ಹೇಳಿರುವುದಾಗಿ ಕೆಲವು ಮಾಧ್ಯಮಗಳು, ವರದಿ ಮಾಡಿದ್ದವು. ಆದರೆ ಇದೀಗ ಈ ಎಲ್ಲಾ ವಿಚಾರಗಳ ಕುರಿತು ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದು ಸದ್ಯದಲ್ಲೇ ಎಲ್ಲದಕ್ಕೂ ಕ್ಲಾರಿಟಿ ಕೊಡುತ್ತೇನೆ ಎಂದು ಹೇಳಿದ್ದಾರೆ.
“ನನಗೆ ಈವರೆಗೂ ಎಸ್‌ಐಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನನಗೆ ಬೆಳ್ತಂಗಡಿ ಠಾಣಾ ಪೊಲೀಸರಿಂದ (Belthangady) ನೋಟಿಸ್ ಬಂದಿತ್ತು. ಅದಕ್ಕಾಗಿ ಮೂರು ದಿನ ಬೆಳ್ತಂಗಡಿ ಠಾಣೆಗೆ ವಿಚಾರಣೆಗಾಗಿ ಹೋಗಿದ್ದೆ. ಅದು ಮುಗಿದಿದೆ. ಎಲ್ಲ ವಿಷಯವಾಗಿ ಶೀಘ್ರದಲ್ಲೇ ಕ್ಲ್ಯಾರಿಟಿ ಕೊಡ್ತೀನಿ” ಇಂದು ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವುದಾಗಿ ಆ ಮಾಧ್ಯಮವು ತಿಳಿಸಿದೆ.
ಇನ್ನೂ ವಿದೇಶದಿಂದ ಫಂಡಿಂಗ್ ಮಾಡಿದ್ದಾರೆ ಎಂಬ ವಿಚಾರವಾಗಿ ಮಾತನಾಡಿ, ನಾನು ಆ ವಿಚಾರವಾಗಿ ಮಾತಾನಾಡಲ್ಲ. ಪೊಲೀಸರ ತನಿಖೆ ನಡೆಯುತ್ತಿದೆ, ಬಳಿಕ ಸತ್ಯ ಹೊರಗಡೆ ಬರುತ್ತೆ. ಆರೋಪಗಳಿಗೆಲ್ಲಾ ಉತ್ತರ ಕೊಟ್ಟುಕೊಂಡು ಕೂರಕ್ಕೆ ಆಗಲ್ಲ. ಪೊಲೀಸರು ವಿಚಾರಣೆ ಮಾಡ್ತಿದ್ದಾರಲ್ಲ, ಅವರೇ ಎಲ್ಲವನ್ನೂ ಬಹಿರಂಗ ಮಾಡ್ತಾರೆ. ಅಲ್ಲದೆ ಅನನ್ಯ ಭಟ್ ವಿಚಾರ ಸೇರಿದಂತೆ ನಾನು ಸದ್ಯದಲ್ಲೇ ಎಲ್ಲ ವಿಚಾರಗಳಿಗೂ ಕ್ಲಾರಿಟಿ ಕೊಡುತ್ತೇನೆ ಎಂದು ಹೇಳಿದ್ದಾರೆ.
Cancer: ಭಾರತದಲ್ಲಿ ಕ್ಯಾನ್ಸರ್ ಬಗ್ಗೆ ಹೊರಬಿದ್ದ ಆಘಾತಕಾರಿ ವರದಿ : ಈ ರಾಜ್ಯಗಳು ಅತಿ ಹೆಚ್ಚು ಅಪಾಯದಲ್ಲಿವೆ?
