Home » Dharmasthala Case: 1st ಪಾಯಿಂಟ್‌ನಲ್ಲಿ ರವಿಕೆ, ಐಡಿ ಕಾರ್ಡ್‌ ದೊರಕಿದ್ದು ನಿಜಾನಾ? ಎಸ್‌ಐಟಿ ನೀಡಿದ ಮಾಹಿತಿ ಏನು?

Dharmasthala Case: 1st ಪಾಯಿಂಟ್‌ನಲ್ಲಿ ರವಿಕೆ, ಐಡಿ ಕಾರ್ಡ್‌ ದೊರಕಿದ್ದು ನಿಜಾನಾ? ಎಸ್‌ಐಟಿ ನೀಡಿದ ಮಾಹಿತಿ ಏನು?

0 comments

Dharmasthala Case: ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣಕ್ಕೆ ಕುರಿತಂತೆ ಮಾಸ್ಕ್‌ಮ್ಯಾನ್‌ ದೂರುದಾರ 13 ಸ್ಥಳಗಳನ್ನು ಗುರುತಿಸಿದ್ದು, ಇಲ್ಲಿಯವರೆಗೆ ಐದು ಪಾಯಿಂಟ್‌ಗಳನ್ನು ಅಗೆಯಲಾಗಿದ್ದು, ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಆದರೆ ಅನನ್ಯ ಭಟ್‌ ಅವರ ತಾಯಿ ಸುಜಾತಾ ಭಟ್‌ ಅವರ ಪರ ವಕೀಲ ಮಂಜುನಾಥ್‌ ಅವರು ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ ಒಂದನೇ ಸ್ಪಾಟ್‌ನಲ್ಲಿ ಎರಡು ಐಡಿ ಕಾರ್ಡ್‌ಗಳು ಲಭ್ಯವಾಗಿದ್ದವು ಎಂದು ಹೇಳಿದ್ದರು.

ಇದೀಗ ಈ ಹೇಳಿಕೆಯನ್ನು ಎಸ್‌ಐಟಿ ಟೀಂ ಸಂಪೂರ್ಣವಾಗಿ ತಳ್ಳಿ ಹಾಕಿದೆ. ಎಸ್‌ಐಟಿ ದೃಢಪಡಿಸುವುದಕ್ಕೆ ಮೊದಲೇ ಮಂಜುನಾಥ್‌ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದರು. ಇದೀಗ ಇದು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಎಸ್‌ಐಟಿ ವಜಾ ಮಾಡಿದ್ದು, ಅವರು ಹೇಳಿರುವ ವಿಷಯ ವಿಶ್ವಾಸಾರ್ಹವಲ್ಲ ಎಂದು ಮಾಹಿತಿ ನೀಡಿದೆ.

You may also like