Home » Dharmasthala Case: ಧರ್ಮಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ: 9 ಮಂದಿ ಪೊಲೀಸರು SIT ಗೆ ಮತ್ತೆ ನೇಮಕ

Dharmasthala Case: ಧರ್ಮಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ: 9 ಮಂದಿ ಪೊಲೀಸರು SIT ಗೆ ಮತ್ತೆ ನೇಮಕ

0 comments

Dharmasthala Case: ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌.ಐ.ಟಿಯ ತಂಡಕ್ಕೆ ಮತ್ತೆ 9 ಮಂದಿ ಪೊಲೀಸರನ್ನು ನೇಮಕಗೊಳಿಸಿ ಆದೇಶ ಮಾಡಲಾಗಿದೆ.

ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಪಿಎಸ್‌ಐ ಲಾರೆನ್ಸ್‌, ಸೆನ್‌ ಪೊಲೀಸ್‌ ಠಾಣೆಯ ಹೆಚ್‌.ಸಿ.ಪುನೀತ್‌, ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಹೆಚ್‌.ಸಿ.ಮನೋಹರ, ವಿಟ್ಲ ಪೊಲೀಸ್ ಠಾಣೆಯ ಪಿ.ಸಿ ಮನೋಜ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಸಿ ಸಂದೀಪ, ಉಡುಪಿ ಸಿ.ಎಸ್.ಪಿ.ಪೊಲೀಸ್ ಠಾಣೆಯ ಪಿ.ಸಿ ಲೋಕೇಶ್, ಹೊನ್ನಾವರ ಪೊಲೀಸ್ ಠಾಣೆಯ ಹೆಚ್.ಸಿ ಪತೀನ್ ನಾಯ್ಕ ಮಂಗಳೂರು ಎಫ್.ಎಮ್.ಎಸ್ ದಳದ ಹೆಚ್.ಸಿ ಜಯರಾಮೇಗೌಡ ಮತ್ತು ಹೆಚ್.ಸಿ ಬಾಲಕೃಷ್ಣ ಗೌಡ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಎಸ್.ಐ.ಟಿ ಸಂಸ್ಥೆಗೆ ವರದಿ ಮಾಡಿಕೊಳ್ಳಲು ಡಿಜಿಪಿಐಜಿಪಿ ಡಾ.ಎಂ.ಎ ಸಲೀಂ ಜುಲೈ 30 ರಂದು ಆದೇಶ ಹೊರಡಿಸಿದ್ದಾರೆ.

You may also like