Home » Bengaluru : ಧರ್ಮಸ್ಥಳ ಪ್ರಕರಣ – ಬೆಂಗಳೂರಲ್ಲಿ ಸಾಹಿತಿಗಳು, ಚಿಂತಕರಿಂದ ಸಭೆ!!

Bengaluru : ಧರ್ಮಸ್ಥಳ ಪ್ರಕರಣ – ಬೆಂಗಳೂರಲ್ಲಿ ಸಾಹಿತಿಗಳು, ಚಿಂತಕರಿಂದ ಸಭೆ!!

0 comments

Bengaluru : ರಾಜ್ಯಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಈ ಪ್ರಕರಣದ ಕುರಿತು ಚರ್ಚಿಸಲು ಬೆಂಗಳೂರಲ್ಲಿ ನಾಡಿನ ಸಾಹಿತಿಗಳು, ಚಿಂತಕರು ಸಭೆ ಸೇರಿದ್ದಾರೆ.

ಹೌದು, ಅಲುಮ್ನಿ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಚಿಂತಕರಾದ ಶಿವಶಂಕರ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್, ನಟ ಚೇತನ್ ಅಹಿಂಸಾ ಮತ್ತಿತರರು ಭಾಗಿಯಾಗಿದ್ದರು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ದೌರ್ಜನ್ಯ, ಅತ್ಯಾಚಾರ, ಕೊಲೆ, ಭೂಕಬಳಿಕೆ, ಮೈಕ್ರೋಫೈನಾನ್ಸ್, ಹೋರಾಟಗಾರರ ಬಂಧನ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ನಿನ್ನೆ ದಿನ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಯೂಟ್ಯೂಬರ್ ಸಮೀರ್ ಎಂಡಿ ಯನ್ನು ಬಂಧಿಸಲು ಹೋದಾಗ ಅವರು ಜಾಮೀನು ಪಡೆದು ಪಾರಾಗಿದ್ದಾರೆ. ಎಲ್ಲದರ ನಡುವೆ ಸಾಹಿತಿಗಳು, ಚಿಂತಕರು ಬೆಂಗಳೂರಲ್ಲಿ ಸಭೆ ನಡೆಸಿರುವುದು ಕುತುಹಲ ಕೆರಳಿಸಿದೆ.

Talapathy Vijay: ತಮಿಳುನಾಡಿನ ಈ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವೆ – ತಳಪತಿ ವಿಜಯ್ ಘೋಷಣೆ!!

You may also like