Mangaluru: ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದಲ್ಲಿ ಇನ್ನೂ ಒಂದು ವಾರ ಅಸ್ಥಿಪಂಜರಗಳಿಗಾಗಿ ಶೋಧ ಕಾರ್ಯ ನಡೆಸಲು ಎಸ್‌ಐಟಿ ಚಿಂತನೆ ನಡೆಸಿದೆ. ಈಗಾಗಲೇ 15 ಪಾಯಿಂಟ್‌ಗಳು ಮಾತ್ರವಲ್ಲದೇ ದೂರುದಾರ ತೋರಿಸಿದ ಎಲ್ಲಾ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಲು ಎಸ್‌ಐಟಿ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಪಾಯಿಂಟ್ ನಂಬರ್ 15ರಲ್ಲಿ ಮಾತ್ರವಲ್ಲದೇ, ಮತ್ತಷ್ಟು ಸ್ಥಳಗಳಲ್ಲಿ ಎಸ್‌ಐಟಿ ಹುಡುಕಾಟ ನಡೆಸಲಿದೆ. 13ನೇ ಪಾಯಿಂಟ್‌ನಲ್ಲಿ ಶೋಧಕ್ಕೆ ಜಿಪಿಆರ್ ಬಳಸಲು ನಿರ್ಧಾರ ಮಾಡಲಾಗಿರುವ ಕುರಿತು ವರದಿಯಾಗಿದೆ. ಜಿಪಿಆರ್ ಯಂತ್ರ ಬಂದ ನಂತರ 13ನೇ ಪಾಯಿಂಟ್‌ಗೆ ಎಸ್‌ಐಟಿ ಆಗಮಿಸಲಿದೆ. ಈ ಕುರಿತು ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಗೃಹಸಚಿವ ಪರಮೇಶ್ವರ್ ಅವರ ಜೊತೆ ಚರ್ಚೆ ನಡೆಸಿದ್ದಾರೆ.
ದೂರುದಾರನಿಗೆ ಸ್ಥಳ ಗುರುತು ಮಾಡಲು ಗೊಂದಲ ಉಂಟಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಶುಕ್ರವಾರ ಅಧಿಕಾರಿಗಳ ತಂಡ ಬೊಳಿಯಾರ್‌ಗೆ ಬಂದಿದ್ದು, ಮಧ್ಯಾಹ್ನ ಒಂದು ಗಂಟೆಗೆ ಮುಸುಕುಧಾರಿ ಮತ್ತು 40 ಅಧಿಕಾರಿಗಳು ಹಾಗೂ ಪೊಲೀಸರ ತಂಡ ಕಾಡು ಪ್ರವೇಶ ಮಾಡಿ ನಂತರ ತಲೆ ಬುರುಡೆಗಳ ಶೋಧ ಕಾರ್ಯ ಮಾಡಿದೆ. ಕಾಡಿನಲ್ಲಿ ಸುಮಾರು ಐದು ಗಂಟೆಗಳ ಕಾರ್ಯಾಚರಣೆಯ ನಂತರ ಎಸ್‌ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನಿಲ್ಲ.
ಆರು ಅಡಿಗಿಂತ ಆಳಕ್ಕೆ ಹೋದ ತಂಡ ಇಲ್ಲೇನು ಇಲ್ಲ ಎಂದು ನಿರ್ಧಾರ ಮಾಡಿದೆ. ಮಾಸ್ಕ್‌ಮ್ಯಾನ್ ಕನ್ಫ್ಯೂಷನ್ ಆಗಿ ಬೇರೆ ಬೇರೆ ಜಾಗವನ್ನು ತೋರಿಸಿದ, ನಂತರ ಕಾಡಿನಲ್ಲಿ ಅಲ್ಲಿ ಇಲ್ಲಿ ಸುತ್ತಾಡಿ ತಂಡ ವಾಪಾಸ್ ಬಂದಿದೆ.
