Home » Dharmasthala: ಧರ್ಮಸ್ಥಳ ಕೇಸ್ – SIT ಯಿಂದ ಮಹಿಳೆಯ ವಿಚಾರಣೆ !!

Dharmasthala: ಧರ್ಮಸ್ಥಳ ಕೇಸ್ – SIT ಯಿಂದ ಮಹಿಳೆಯ ವಿಚಾರಣೆ !!

0 comments

Dharmasthala : ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟಿರುವ ಪ್ರಕರಣ ತನಿಖೆ ಇದೀಗ ಅಂತಿಮ ಹಂತದಲ್ಲಿದೆ. ಇದೀಗ ಸ್ಪಾಟ್ ಸಂಖ್ಯೆ 15 ಕ್ಕೆ ಸಂಬಂಧಿಸಿದಂತೆ ಸಾಕ್ಷಿಯನ್ನಾಗಿ ಮಹಿಳೆಯೊಬ್ಬರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ಅನಾಮಿಕ ಧರ್ಮಸ್ಥಳದ ಬೋಳಿಯಾರ್‌ನಲ್ಲಿ ಸ್ಪಾಟ್‌ ಸಂಖ್ಯೆ 15ನ್ನು ಗುರುತಿಸಿದ್ದನು. ಪಾಯಿಂಟ್ ನಂಬರ್ 15 ಹಾಗೂ ಅಕ್ಕಪಕ್ಕದಲ್ಲಿ ಮತ್ತೆರಡು ಕಡೆ ಉತ್ಖನನ ನಡೆಸಿದ್ರೂ ಯಾವುದೇ ಕಳೇಬರ ಸಿಕ್ಕಿರಲಿಲ್ಲ.

ಕಲ್ಲೇರಿಯಲ್ಲಿ ನೋಡಿದ ಬಾಲಕಿಯ ಶವ ಹೂತಿದ್ದಾಗಿ ಹೇಳಿದ ಎಂದ ದೂರುದಾರ ಹೇಳಿದ್ದನು. ಉತ್ಖನನ ನಡೆಸಿದಾಗ ಕಳೇಬರ ಸಿಗದೇ ಇದ್ದಾಗ ಸ್ಥಳೀಯರನ್ನು ಕೇಳಿ ಅಂತ ಅನಾಮಿಕ ವಾದಿಸಿದ್ದನಂತೆ. ಇಲ್ಲಿ ಶವ ಹೂತ ನಂತರ ನೀರು ಕುಡಿಯಲು ಹಾಗೂ ಸಲಕರಣೆಗಳನ್ನು ತೊಳೆಯಲು ಸ್ಥಳೀಯ ಮನೆಗೆ ಹೋಗಿದ್ದಾಗಿ ಹೇಳಿದಾಗಿ ಹೇಳಿದ್ದನು. ಸ್ಥಳೀಯರಿಗೆ ಶವ ಹೂತ ವಿಚಾರ ಗೊತ್ತಿದೆ ಎಂದು ಅನಾಮಿಕ ಹೇಳುತ್ತಿದ್ದಾನೆ ಎನ್ನಲಾಗಿದೆ.

You may also like