Dharmasthala : ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟಿರುವ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದರ ನಡುವೆ ಅನಾಮಿಕ ದೂರು ದಾರಿ ಸೂಚಿಸಿದ 13 ಸ್ಥಳಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಅಸ್ತಿಪಂಜರಗಳು ಪತ್ತೆಯಾಗಿದೆ. ಹೀಗಾಗಿ ಇದೀಗ ಅನಾಮಿಕ ದೂರುದಾರನ ಕುರಿತಾಗಿ ಕೆಲವು ಅನುಮಾನಗಳು ಮೂಡಿವೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ತಂಡವು ಈ ಮಾಸ್ಕ್ ಮ್ಯಾನ್ ನ ಮಂಪರು ಪರೀಕ್ಷೆಗೆ ತಯಾರಿ ನಡೆಸಿದೆ ಎಂಬ ಮಾಹಿತಿ ದೊರೆತಿದೆ.
ಹೌದು, ದೂರುದಾರ ಮಾಸ್ಕ್ ಮ್ಯಾನ್ ತೋರಿಸಿರುವ 17 ಸ್ಥಳಗಳಲ್ಲಿ ಈಗಾಗಲೇ ಅಸ್ಥಿಪಂಜರಕ್ಕಾಗಿ ಶೋಧಕಾರ್ಯ ನಡೆಸಿದರೂ ಒಂದು ಸ್ಥಳವನ್ನು ಹೊರತುಪಡಿಸಿ ಬೇರೆಲ್ಲೂ ಯಾವುದೇ ಅಸ್ಥಿಪಂಜರಗಳ ಅವಶೇಷ ಸಿಕ್ಕಿಲ್ಲ. ಇದರಿಂದ ಎಸ್ ಐಟಿ ತಂಡ ದೂರುದಾರ ಮಂಪರು ಪರೀಕ್ಷೆಗೆ ಮುಂದಾಗಿದೆ ಎನ್ನಲಾಗಿದೆ.
ಈವರೆಗೂ ನಡೆಸಿರುವ ಶೋಧಕಾರ್ಯದಲ್ಲಿ ಒಂದು ಜಾಗ ಬಿಟ್ಟು ಬೇರೆಲ್ಲೂ ಯಾವುದೇ ಮೂಳೆಗಳು ಸಿಗದಿರುವ ಹಿನ್ನೆಲೆಯಲ್ಲಿ ಹಾಗೂ ದೂರುದಾರ ಮತ್ತಷ್ಟು ಜಾಗ ತೋರಿಸುವುದಾಗಿ ಹೇಳುತ್ತಿರುವ ಹಿನ್ನೆಲೆಯಲ್ಲಿ ಎಸ್ ಐಟಿ ತಂಡ ದೂರುದಾರ ಮಾಸ್ಕ್ ಮ್ಯಾನ್ ನ ಮಂಪರು ಪರೀಕ್ಷೆಗೆ ಸಿದ್ಧತೆ ನಡೆಸಿದೆ. ಮಂಪರು ಪರೀಕ್ಷೆಗಾಗಿ ಕೋರ್ಟ್ ನಿಂದ ಅನುಮತಿ ಪಡೆಯಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Dharmasthala: ಧರ್ಮಸ್ಥಳ ಪ್ರಕರಣ- SIT ಕಚೇರಿಗೆ ಇಬ್ಬರು ಹೊಸ ದೂರುದಾರರ ಆಗಮನ!!
