8
Dharmasthala Case: ಧರ್ಮಸ್ಥಳದಲ್ಲಿ ಸಮಾಧಿ ಮಾಡಲಾಗಿದೆ ಎನ್ನಲಾದ ತಲೆ ಬುರುಡೆ ಕೇಸ್‌ಗೆ ಸಂಬಂಧಪಟ್ಟಂತೆ ಇಂದು ನಡೆದ ಪಾಯಿಂಟ್ 9,10 ರಲ್ಲಿ ಉತ್ಖನನ ಕಾರ್ಯ ನಡೆದಿದ್ದು, ಯಾವುದೇ ರೀತಿಯ ಕಳೇಬರ ಪತ್ತೆಯಾಗಿಲ್ಲ ಎನ್ನಲಾಗಿದೆ. ಇದರ ಜೊತೆಗೆ ನಾಳೆ ಭಾನುವಾರವಾಗಿದ್ದು, ತನಿಖೆ ನಡೆಸಲಾಗುತ್ತದೆಯೇ?
ಆದಿತ್ಯವಾರ ಸರಕಾರಿ ರಜಾ ದಿನವಾಗಿರುವುದರಿಂದ ಇಲಾಖಾ ಅಧಿಕಾರಿಗಳಿಗೂ ರಜೆ ಇದೆ ಎನ್ನಲಾಗಿದೆ. ಹಾಗಾಗಿ ಸೋಮವಾರ ಉತ್ಖನನ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸರಕಾರಿ ರಜೆ ಇರುವ ಕಾರಣ ಎಸಿ ಸೇರಿ ಕಂದಾಯ ಇಲಾಖೆ, ಎಫ್‌ಎಸ್‌ಎಲ್, ಸೋಕೋ ಅಧಿಕಾರಿಗಳಿಗೂ ರಜೆ ಇರುವುದರಿಂದ ಬಹುತೇತ ಭಾನುವಾರ ಉತ್ಖನನ ಕಾರ್ಯ ನಡೆಯುವ ಸಾಧ್ಯತೆ ಕಡಿಮೆ.
