Home » Dharmasthala : ಮುಜರಾಯಿ ಇಲಾಖೆಗೆ ಧರ್ಮಸ್ಥಳ ಕ್ಷೇತ್ರ ? ಸಚಿವ ರಮಾಲಿಂಗ ರೆಡ್ಡಿ ಹೇಳಿದ್ದೇನು?

Dharmasthala : ಮುಜರಾಯಿ ಇಲಾಖೆಗೆ ಧರ್ಮಸ್ಥಳ ಕ್ಷೇತ್ರ ? ಸಚಿವ ರಮಾಲಿಂಗ ರೆಡ್ಡಿ ಹೇಳಿದ್ದೇನು?

0 comments
Ramalinga Reddy

Dharmasthala : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕೆಲವು ಅಪಪ್ರಚಾರಗಳು ಕೇಳಿ ಬಂದ ಬಳಿಕ ಧರ್ಮಸ್ಥಳ ಕ್ಷೇತ್ರವನ್ನು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಗೆ ವಹಿಸಬೇಕೆಂದು ಕೆಲವರು ಆಗ್ರಹಿಸಿದ್ದರು. ಇದೀಗ ಈ ಕುರಿತಾಗಿ ಸಚಿವ ರಮಾಲಿಂಗ ರೆಡ್ಡಿಯವರು ಸ್ಪಷ್ಟೀಕರಣ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮುಖಂಡರು ಹಿಂದೂ ದೇವಾಲಯಗಳನ್ನ ಧಾರ್ಮಿಕ ದತ್ತಿ‌ ಇಲಾಖೆಯಿಂದ ಬಿಡುಗಡೆ ಮಾಡಿ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವರು ಧರ್ಮಸ್ಥಳ ಕುರಿತು ಕೂಡ ಮಾತನಾಡಿದ್ದಾರೆ. ಈ ವೇಳೆ ಅವರು ‘ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡುವ ಯಾವುದೇ ರೀತಿಯ ಪ್ರಸ್ತಾವ ರಾಜ್ಯ ಸರಕಾರದ ಮುಂದೆ ಇಲ್ಲ. ಆ ಕುರಿತಾಗಿ ಯಾವುದೇ ಒತ್ತಡಗಳು ಕೂಡ ಕೇಳಿ ಬಂದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:Bangalore: ಸಮೀಕ್ಷೆಯಲ್ಲಿ ಪಾಲ್ಗೊಂಡ 1.3 ಲಕ್ಷ ಶಿಕ್ಷಕ, ಶಿಕ್ಷಕೇತರರಿಗೆ 5,000 ರೂ. ಬಿಡುಗಡೆ, ಬಿರುಸು ಪಡೆದುಕೊಂಡ ಗಣತಿ

ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದಲ್ಲೇ ಒಂದು ಕಾನೂನು ತಂದರೆ ನಮ್ಮ ಅಭ್ಯಂತರವಿಲ್ಲ. ಹಿಂದೆ ಧಾರ್ಮಿಕ ದತ್ತಿ ಇಲಾಖೆಯೇ ಇರಲಿಲ್ಲ. ಅನುವಂಶಿಕ ದೇವಾಲಯಗಳಿದ್ದವು. ಆಗ ಅಣ್ಣ- ತಮ್ಮಂದಿರು ಹಾಗೂ ಉತ್ತರಾಧಿಕಾರಿಗಳ ನಡುವೆ ಜಗಳ ನಡೆಯುತ್ತಿತ್ತು. ಈ ಕಾರಣದಿಂದ ಬ್ರಿಟಿಷರ ಕಾಲದಲ್ಲಿ ಮುಜರಾಯಿ ಇಲಾಖೆ ಆರಂಭ ಆಯಿತು ಎಂದು ವಿವರಿಸಿದರು.

You may also like