Home » ಧರ್ಮಸ್ಥಳ ನಿಗೂಢ ಪ್ರಕರಣ: 8 ಗಂಟೆ ಮ್ಯಾರಥಾನ್ ವಿಚಾರಣೆ, ಬಳಿಕ ವಕೀಲರೊಂದಿಗೆ ನಿಗೂಢ ಸ್ಥಳಕ್ಕೆ ಪ್ರಯಾಣ

ಧರ್ಮಸ್ಥಳ ನಿಗೂಢ ಪ್ರಕರಣ: 8 ಗಂಟೆ ಮ್ಯಾರಥಾನ್ ವಿಚಾರಣೆ, ಬಳಿಕ ವಕೀಲರೊಂದಿಗೆ ನಿಗೂಢ ಸ್ಥಳಕ್ಕೆ ಪ್ರಯಾಣ

by ಹೊಸಕನ್ನಡ
0 comments

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಕೊಲೆ, ಅತ್ಯಾಚಾರ ನಡೆದ ಶವಗಳನ್ನು ಹೂತಿದ್ದೇನೆ, ಎಲ್ಲಾ ಶವಗಳನ್ನು ಸಮಾಧಿಯಿಂದ ತೆಗೆದು ತೋರಿಸುತ್ತೇನೆ ಎಂದು ಹೇಳಿರುವ ಸಾಕ್ಷಿ ಕo ದೂರುದಾರ ಜು.26 ರಂದು ಮಂಗಳೂರಿನಲ್ಲಿ ಎಸ್. ಐ. ಟಿ ಅಧಿಕಾರಿ ಡಿಐಜಿ ಎಂ. ಎನ್. ಅನುಚೇತ್ ಮುಂದೆ ಹಾಜರಾಗಿದ್ದರು.

ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾದ ಭೀಮ ನಿರಂತರವಾಗಿ 7 ಗಂಟೆಯ ತನಕ ತನ್ನ ಹೇಳಿಕೆಯನ್ನು ನೀಡಿದ್ದಾರೆ. ಒಟ್ಟು 7.30 ಯಿಂದ 8 ಗಂಟೆಗಳ ತನಕ ತನ್ನಲ್ಲಿರುವ ಸಂಪೂರ್ಣ ಮಾಹಿತಿಯನ್ನು ಎಸ್. ಐ. ಟಿ ಅಧಿಕಾರಿ ಅನುಚೇತ್ ಅವರ ಮುಂದೆ ಹೇಳಿದ್ದಾರೆ ಎನ್ನುವ ಮಾಹಿತಿ ಬಂದಿದೆ.

ವಿಚಾರಣೆಯ ಸಂದರ್ಭ ಮುಸುಕುಧಾರಿ ಸಾಕ್ಷಿದಾರ ಸಮಸ್ತ ವಿವರಗಳ ಜತೆ ಹೇಳಿಕೆ ನೀಡಿದ್ದು ಮಹತ್ವದ ಮಾಹಿತಿ SIT ಅಧಿಕಾರಿಗಳ ನೋಟ್ ಪ್ಯಾಡ್ ಸೇರಿಕೊಂಡಿದೆ ಎನ್ನಲಾಗಿದೆ. ಅನಾಮಿಕ ದೂರುದಾರ ತನ್ನ ಹೇಳಿಕೆ ನೀಡಿದ ನಂತರ ತನ್ನ ವಕೀಲರೊಂದಿಗೆ ಆತ ನಿಗೂಢ ಸ್ಥಳಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿಯಿದೆ.

ಎಸ್‌ಐಟಿ ಕೇಳಿದೆ ಎನ್ನಲಾದ ಪ್ರಶ್ನೆಗಳು ಯಾವುವು?

* ನೂರಾರು ಶವಗಳನ್ನು ಹೂತು ಹಾಕಿದ್ದೀರಾ ನೀವು ?

* ಯಾಕೆ ಶವಗಳನ್ನು ಹೂತು ಹಾಕಿದ್ದು, ಹೇಳಿದ್ದು ಯಾರು?

* ಮೃತಪಟ್ಟವರ ಶವ ಹೂತು ಹಾಕಿದ ವಿಧಾನ ಹೇಗೆ?

* ಎಲ್ಲೆಲ್ಲಿ ಶವಗಳನ್ನು ಹೂತು ಹಾಕಿದ್ದೀರಿ, ಯಾವಾಗ?

* ಶವಗಳನ್ನು ಹೂತು ಹಾಕಿ ಸಮಯ.ಆಯ್ತಲ್ಲ, ಈಗ ಯಾಕೆ ನಿಮಗೆ ಅದರ ಬಗ್ಗೆ ಅನುಮಾನ ಬಂತು?

* ಶವಗಳು ಅನುಮಾನಸ್ಪದವಾಗಿ ಕಂಡಿದ್ದಕ್ಕೆ ಕಾರಣ.ಏನು, ಸಹಜ ಸಾವು ಆಗಿರಬಹುದಲ್ಲ ?

*ಮೃತದೇಹವನ್ನು ಮಣ್ಣು ಮಾಡಲು ನಿಮಗೆ ಕೊಟ್ಟಾಗ ಯಾವ ಸ್ಥಿತಿಯಲ್ಲಿತ್ತು?

ಇವೆಲ್ಲದಕ್ಕೂ ನೆನಪಿನ ಅಂಗಳದಿಂದ ಸಮರ್ಪಕ ಉತ್ತರಗಳನ್ನು ಹೆಕ್ಕಿ ತಕ್ಷಣ ಭೀಮ ನೀಡಿದ್ದಾಗಿ ಪತ್ರಿಕೆಗಳು ವರದಿ ಮಾಡಿವೆ

You may also like