Home » Dharmasthala: ಬರ್ತಿದೆಯಂತೆ “ಧರ್ಮಸ್ಥಳ ಫೈಲ್ಸ್” ಸಿನಿಮಾ: ರಿಜಿಸ್ಟರ್ ಆಗಾಯ್ತು ಟೈಟಲ್, ಚಿತ್ರರಂಗದಲ್ಲೂ ಸದ್ದು ಮಾಡುತ್ತ ಧರ್ಮಸ್ಥಳದ ಪ್ರಕರಣ!  

Dharmasthala: ಬರ್ತಿದೆಯಂತೆ “ಧರ್ಮಸ್ಥಳ ಫೈಲ್ಸ್” ಸಿನಿಮಾ: ರಿಜಿಸ್ಟರ್ ಆಗಾಯ್ತು ಟೈಟಲ್, ಚಿತ್ರರಂಗದಲ್ಲೂ ಸದ್ದು ಮಾಡುತ್ತ ಧರ್ಮಸ್ಥಳದ ಪ್ರಕರಣ!  

0 comments

Dharmasthala: ಇಡೀ ರಾಜ್ಯವೇ ಬೆಚ್ಚಿ ಬೀಳಿಸಿದ ಧರ್ಮಸ್ಥಳ ಪ್ರಕರಣ ಸಂಬಂಧ ಎಸ್ ಐಟಿ ಮತ್ತು ಅನಾಮಿಕ ವ್ಯಕ್ತಿ ಇನ್ನಷ್ಟು ಶೋಧನೆಗಿಳಿದಿದ್ದಾರೆ. ಈ ಬೆನ್ನಲ್ಲೇ ಜನರು ಧರ್ಮಸ್ಥಳ ಪ್ರಕರಣದ ಕುರಿತು ಚರ್ಚಿಸೋದು ಜಾಸ್ತಿಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕರ್ನಾಟಕ ಸಿನಿಮಾ ವಾಣಿಜ್ಯ ಮಂಡಳಿಯಲ್ಲಿ ಧರ್ಮಸ್ಥಳ ಫೈಲ್ಸ್ ಎನ್ನುವ ಸಿನಿಮಾ ಟೈಟಲ್ ರಿಜಿಸ್ಟರ್ ಆಗಿದ್ದು ಚಿತ್ರರಂಗದಲ್ಲೂ ಸದ್ದು ಮಾಡಲು ಧರ್ಮಸ್ಥಳದ ಪ್ರಕರಣ ಸಿದ್ದವಾದಂತಿದೆ.

ಹೌದು ಧರ್ಮಸ್ಥಳ ಫೈಲ್ಸ್ ಟೈಟಲ್ ನ್ನು ನಿರ್ಮಾಪಕ ಎ ಗಣೇಶ್ ಅವರು ರಿಜಿಸ್ಟರ್ ಮಾಡಿದ್ದು ಈ ಕುರಿತು ಈ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಟೈಟಲ್ ಗೆ ಫಿಲ್ಮ್ ಚೇಂಬರ್ ಸಮ್ಮತಿ ಸೂಚಿಸಿದ್ದು, ಈ ಸಿನಿಮಾ ಯಾವಾಗ ಶುರುವಾಗಬಹುದು, ಯಾರು ನಟಿಸುತ್ತಾರೆ ಎನ್ನುವ ಕುರಿತು ಮಾಹಿತಿ ದೊರೆತಿಲ್ಲ.

ಸದ್ಯ ಧರ್ಮಸ್ಥಳದಲ್ಲಿ ಗುಂಡಿ ಅಗೆಯುವ ಕಾರ್ಯ ಪ್ರಗತಿಯಲ್ಲಿದ್ದು ಇನ್ನೂ ಎಷ್ಟು ಅಸ್ಥಿಪಂಜರಗಳು ಸಿಗಬಹುದು ಎನ್ನುವ ಕುತೂಹಲದಲ್ಲಿ ಇಡೀ ದೇಶವೇ ಕಾದು ಕುಳಿತಿದೆ. ಹಾಗಾಗಿ ನಿರ್ದೇಶಕರು ನಿರ್ಮಿಸಬೇಕೆಂದಿರುವ “ಧರ್ಮಸ್ಥಳ ಫೈಲ್ಸ್” ಸಿನಿಮಾ ಕತೆಗೆ ಇನ್ನಷ್ಟು ತಿರುವು ಸಿಗಲಿದೆಯಾ ಕಾದು ನೋಡಬೇಕಷ್ಟೆ.

ಇದನ್ನೂ ಓದಿ: Prajwal Revanna: ಅತ್ಯಾಚಾರ ಪ್ರಕರಣ ಆರೋಪ: ಪ್ರಜ್ವಲ್‌ ರೇವಣ್ಣ ದೋಷಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು

You may also like