Home » ಧರ್ಮಸ್ಥಳ: ಮಾಧ್ಯಮಗಳಲ್ಲಿ ಬರುತ್ತಿರೋದೆಲ್ಲ ಸತ್ಯವಲ್ಲ- ಗೃಹ ಸಚಿವ ಜಿ ಪರಮೇಶ್ವರ್; ಬುರುಡೆ ಬಿಡ್ತಿರೋದು ಮೀಡಿಯಾಗಳಾ?

ಧರ್ಮಸ್ಥಳ: ಮಾಧ್ಯಮಗಳಲ್ಲಿ ಬರುತ್ತಿರೋದೆಲ್ಲ ಸತ್ಯವಲ್ಲ- ಗೃಹ ಸಚಿವ ಜಿ ಪರಮೇಶ್ವರ್; ಬುರುಡೆ ಬಿಡ್ತಿರೋದು ಮೀಡಿಯಾಗಳಾ?

0 comments
Dr G parameshwar

ಬೆಂಗಳೂರು: ಗೃಹ ಸಚಿವ ಜಿ ಪರಮೇಶ್ವರ್ ರವರು ಮಾಧ್ಯಮಗಳ ಜತೆ ಮಾತನಾಡಿ ಬಹುಪಾಲು ಮಾಧ್ಯಮಗಳು ಹೇಳೋದೆಲ್ಲ ಸತ್ಯ ಅಲ್ಲ ಅಂತ ಎರಡೆರಡು ಸಲ ಒತ್ತಿ ಹೇಳಿದ್ದಾರೆ. Sit ತನಿಖಾ ಅಧಿಕಾರಿಗಳು ವರದಿ ಕೊಟ್ಟ ಮೇಲೆ ಏನಾದರೂ ಹೇಳಬಹುದು. ಈಗ ತನಿಖೆಯ ಹಂತದಲ್ಲಿದೆ. ಎಸ್ಐಟಿ ಅಧಿಕಾರಿಗಳು ತನಿಖೆಯ ವಿವರಗಳನ್ನು ಹೊರಗಡೆ ಯಾರಿಗೂ ತಿಳಿಸುವುದಿಲ್ಲ. ಈಗ ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲ ಸತ್ಯ ಅಲ್ಲ ಅಂತ ಹೇಳಿದ್ದಾರೆ. ಆ ಮೂಲಕ ಬುರುಡೆ ಬಿಡುತ್ತಿರೋದು ನಮ್ಮ ಘನ ಮಾಧ್ಯಮಗಳು ಅನ್ನುವ ದಾಟಿಯಲ್ಲಿ ಇದೆ ಗೃಹ ಸಚಿವರ ಹೇಳಿಕೆ.

ನಿನ್ನೆ ಜಿ ಪರಮೇಶ್ವರ್ ರವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನಾವು ಎಸ್ ಐಟಿ ತನಿಖೆಗೆ ಕಾಲಮಿತಿ ನಿಗದಿ ಮಾಡಿಲ್ಲ. ಆದಷ್ಟು ಬೇಗ ಮಾಡಿ ಅಂದಿದ್ದಾರೆ ಮುಖ್ಯ ಮಂತ್ರಿಗಳು. ಆದಷ್ಟು ಬೇಗ ಅಂದ್ರೆ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸಿ ಬಿಡಲು ಆಗಲ್ಲ. ತನಿಖೆ ನಡೆಯುತ್ತಿದ್ದಾಗ, ಆ ತನಿಖೆಯು ಎಲ್ಲೋ ಇನ್ನೊಂದು ದಿಕ್ಕಿನತ್ತ ಸಾಗಬಹುದು. ಹಾಗಾಗಿ ತನಿಖೆಗೆ ಸಾಕಷ್ಟು ಕಾಲಾವಕಾಶ ಬೇಕಿರುತ್ತದೆ ಎಂದಿದ್ದಾರೆ.

ಈ ಮಧ್ಯೆ, ಗೃಹ ಸಚಿವರ ಒಂದು ಮಾತು ಇದೀಗ ಚರ್ಚೆಗೆ ಕಾರಣವಾಗಿದೆ. ಮಾಧ್ಯಮಗಳು ಹೇಳುತ್ತ ಬಂದಿರೋದು ಸತ್ಯವಲ್ಲ. ಅದು ಊಹಾಪೋಹ ಅಂದಿದ್ದಾರೆ. ಕೆಲವು ಸಲ ಸ್ಪೆಕ್ಯುಲೇಶನ್ ಸತ್ಯ ಆಗಬಹುದು. ಆದರೆ ಈಗ ಮಾಧ್ಯಮಗಳಲ್ಲಿ ಬರುತ್ತಿರುವುದು SIT ಯ ತನಿಖಾ ಪ್ರಗತಿಯ ವರದಿಯಲ್ಲ ಎಂದಿದ್ದಾರೆ. ಈ ಮೂಲಕ, ಬುರುಡೆ ರಹಸ್ಯ, ಮಾಸ್ಕ್ ಮ್ಯಾನ್ ಉಲ್ಟಾ, ಲ್ಯಾಬ್ ನಿಂಡ ಬುರುಡೆ ಖರೀದಿ ಇತ್ಯಾದಿ ವಿಚಾರಗಳ ಫ್ರಂಟ್ ಲೈನ್ ಮಾಧ್ಯಮಗಳ ಟಿವಿ ಶೋ ಮತ್ತು ಮುಖ ಪುಟ ವರದಿಗಳು ಸತ್ಯಕ್ಕೆ ದೂರ ಅಂದಿದ್ದಾರೆ ಗೃಹ ಸಚಿವರು.

ನಮ್ಮ ರಾಜ್ಯದವರಾದ ಮೊಹಂತಿಯ ನೇತೃತ್ವದಲ್ಲಿ ಮುಖ್ಯ ಮಂತ್ರಿಗಳು ನಂಬಿಕೆ ಇಟ್ಟು ತನಿಖೆಯ ನೇತೃತ್ವ ಕೊಟ್ಟಿದ್ದಾರೆ. ಅವರು ಸರಿಯಾದ. ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ. ಎಲ್ಲರೂ ಶಾಂತಿ ಸೌಹಾರ್ದತೆ ಕಾಯ್ದುಕೊಳ್ಳಬೇಕು ಎಂದು ಗೃಹಸಚಿವರು ಮನವಿ ಮಾಡಿಕೊಂಡಿದ್ದಾರೆ.

You may also like