Home » Dharmasthala: ತೋಟದ ಕೆಲಸಕ್ಕೆಂದು ಬಂದ ವ್ಯಕ್ತಿಗೆ ವಿದ್ಯುತ್‌ ಶಾಕ್‌! ಅಲ್ಯೂಮಿನಿಯಂ ಏಣಿಗೆ ವಿದ್ಯುತ್‌ ತಂತಿ ತಗುಲಿ ವ್ಯಕ್ತಿ ಸಾವು!!

Dharmasthala: ತೋಟದ ಕೆಲಸಕ್ಕೆಂದು ಬಂದ ವ್ಯಕ್ತಿಗೆ ವಿದ್ಯುತ್‌ ಶಾಕ್‌! ಅಲ್ಯೂಮಿನಿಯಂ ಏಣಿಗೆ ವಿದ್ಯುತ್‌ ತಂತಿ ತಗುಲಿ ವ್ಯಕ್ತಿ ಸಾವು!!

by Mallika
1 comment
Dharmasthala

Dharmasthala: ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಯೂಮಿನಿಯಂ ಏಣಿ ವಿದ್ಯುತ್‌ ತಂತಿಗೆ ತಾಯಿ, ಕಾರ್ಮಿಕನೋರ್ವ ವಿದ್ಯುತ್‌ ಶಾಕ್‌ಗೆ ಒಳಗಾಗಿ ಸಾವಿಗೀಡಾದ ಘಟನೆಯೊಂದು ನಡೆದಿದೆ.

ಈ ಘಟನೆ ನ.24 ರಂದು ಬೆಳಿಗ್ಗೆ ಸಂಭವಿಸಿದ್ದು, ಮಲ್ಲರ್ಮಾಡಿ ಎಂಬಲ್ಲಿ ನಡೆದಿದೆ. ಬಾಲಕೃಷ್ಣ ಶೆಟ್ಟಿ (49) ಎಂಬುವವರೇ ಮೃತಪಟ್ಟವರು.

ಇಂದು ಬೆಳಗ್ಗೆ ಸ್ಥಳೀಯ ನಿವಾಸಿ ಬೊಮ್ಮಣ್ಣ ಗೌಡ ಅವರ ಮನೆಗೆ ತೋಟದ ಕೆಲಸಕ್ಕೆಂದು ಹೋದ ಬಾಲಕೃಷ್ಣ ಶೆಟ್ಟಿ ಅವರು ಸೊಪ್ಪುಕಡಿಯಲೆಂದು ಅಲ್ಯೂಮಿನಿಯಂ ಏಣಿಯನ್ನು ಎತ್ತಿಕೊಂಡು ಹೋಗುತ್ತಿದ್ದಾಗ, ತೋಟದ ನಡುವಿನಲ್ಲಿ ಹಾದುಹೋಗಿದ್ದ ವಿದ್ಯುತ್‌ಲೈನ್‌ಗೆ ತಾಗಿ ವಿದ್ಯುತ್‌ ಶಾಕ್‌ ಆಗಿದೆ.

ಅಲ್ಲೇ ಕುಸಿದು ಬಿದ್ದ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದರೂ, ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಮಾಡಿದ್ದಾರೆ.

ಇದನ್ನು ಓದಿ: Gruhalakshmi Yojana – Annabhagya Yojana: ಇನ್ಮುಂದೆ ಇವರಿಗೆ ಮಾತ್ರ ಸಿಗುತ್ತೆ ‘ಗೃಹಲಕ್ಷ್ಮೀ’ ಹಣ – ಸಂಪುಟ ಸಭೆಯಲ್ಲಿ ಹೊಸ ಟ್ವಿಸ್ಟ್!!

You may also like

Leave a Comment