3
Mangalore: ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿಯೊಬ್ಬ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೋಧ ಕಾರ್ಯ ನಡೆಯುತ್ತಿದ್ದು, 13ನೇ ಪಾಯಿಂಟ್ ಮಾಡಿದ ಸ್ಥಳದಲ್ಲಿ ಉತ್ಖನನ ಮಾಡಲು ಭೂಗತ ರಾಡರ್ (ಜಿಪಿಆರ್) ತಂತ್ರಜ್ಞಾನವನ್ನು ಬಳಸಲು ವಿಶೇಷ ತನಿಖಾ ತಂಡ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಪಿಆರ್ ಯಂತ್ರದ ಭಾಗಗಳನ್ನು ಸಿಬ್ಬಂದಿ ಜೋಡಿಸುತ್ತಿರುವ ದೃಶ್ಯಗಳು ಸೋಮವಾರ ಮಧ್ಯಾಹ್ನ ಕಂಡು ಬಂದಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
13ನೇ ಸ್ಥಳದಲ್ಲಿ ಮೊದಲು ಜಿಪಿಆರ್ ತಂತ್ರಜ್ಞಾನ ಬಳಸಿ ಪರಿಶೀಲನೆ ಮಾಡಲು ಎಸ್‌ಐಟಿ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ. ಮೂಳೆಗಳ ಇರುವಿಕೆನ್ನು ಖಚಿತಪಡಿಸಿಕೊಂಡ ನಂತರ ಅಗೆತ ಕಾರ್ಯವನ್ನು ತನಿಖಾ ತಂಡ ಮಾಡಲಿದೆ ಎಂದು ವರದಿಯಾಗಿದೆ.
