ಧರ್ಮಸ್ಥಳ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ ಲೇಡಿ ಸ್ಕೌಟ್ ಮಾಸ್ಟರ್ ಶಶಿಕಲಾ ಎಂ. ಅವರು ಸ್ಕೌಟ್ಸ್ ವಿಭಾಗದ ಉನ್ನತ ಹಂತದ ತರಬೇತಿಯಾದ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ ಪಡೆದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ತರಬೇತಿ ಕೇಂದ್ರ, ಪಚ್ಚಾರಿ ವತಿಯಿಂದ ನೀಡಲಾಗುವ ಪ್ರಮಾಣಪತ್ರ ಹಾಗೂ ಪಾರ್ಚ್‌ಮೆಂಟ್‌ಗೆ ಭಾಜನರಾಗಿದ್ದಾರೆ.
ಅವರು, ಸೆ.24 ರಿಂದ 30ರವರೆಗೆ ದೊಡ್ಡಬಳ್ಳಾಪುರದ ಆನಿಬೆಸೆಂಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದಲ್ಲಿ ಸ್ಕೌಟ್ಸ್ ವಿಭಾಗದ ಲೀಡರ್ ಟ್ರೈನರ್ ಗೋಪಾಲಕೃಷ್ಣ ಅವರ ಶಿಬಿರ ನಾಯಕತ್ವದಲ್ಲಿ ತರಬೇತಿಯನ್ನು ಪಡೆದಿದ್ದರು.















