Home » Attack On Young lady: ಅಜ್ಞಾತ ಸ್ಥಳಕ್ಕೆ ಮುಸ್ಲಿಂ ಹುಡುಗಿ ಎಳೆದೊಯ್ದು ಮಾರಣಾಂತಿಕ ಹಲ್ಲೆ – ರಕ್ತದ ಮಡುವಿನಲ್ಲಿ ಒದ್ದಾಡಿದ ಜೀವ

Attack On Young lady: ಅಜ್ಞಾತ ಸ್ಥಳಕ್ಕೆ ಮುಸ್ಲಿಂ ಹುಡುಗಿ ಎಳೆದೊಯ್ದು ಮಾರಣಾಂತಿಕ ಹಲ್ಲೆ – ರಕ್ತದ ಮಡುವಿನಲ್ಲಿ ಒದ್ದಾಡಿದ ಜೀವ

1 comment
Attack On Young lady

Attack on young lady : ಧಾರವಾಡದಲ್ಲಿ ಮುಸ್ಲಿಮ್‌ ಯುವತಿಯೊಬ್ಬಳನ್ನು ಅಪಹರಿಸಿ ಕುತ್ತಿಗೆ ಮತ್ತು ಕೈಗೆ ಚಾಕುವಿನಿಂದ (Attack on young lady)ಇರಿದ ಘಟನೆ ವರದಿಯಾಗಿದೆ.

ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ‌ ಸಮೀಪ 20 ರ ಹರೆಯದ ಯುವತಿಯೊಬ್ಬಳನ್ನು ಅಜ್ಞಾತ ಸ್ಥಳಕ್ಕೆ ಎಳೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ (Attack on Young lady) ಮಾಡಿದ ಘಟನೆ ನಡೆದಿದೆ. ಯುವತಿಗೆ ಚೂರಿಯಿಂದ ಕ್ರೂರವಾಗಿ ಇರಿಯಲಾಗಿದ್ದು, ಆಕೆಯ ಕತ್ತು, ಕೈ, ಮುಖ ಪೂರ್ತಿ ರಕ್ತಮಯವಾಗಿದೆ ಎನ್ನಲಾಗಿದೆ.

ಭಾನುವಾರ ರಾತ್ರಿ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಯುವತಿಯೊಬ್ಬಳು ರಕ್ತಸಿಕ್ತವಾಗಿ ಬಿದ್ದಿರುವುದನ್ನು ನೋಡಿ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯನ್ನು ವಿಚಾರಿಸಿದ ಸಂದರ್ಭ ಆಕೆಯ ಹೆಸರು ಬಿಬಿ ನಿಸ್ಬಾ ಡಂಬಳ (20) ಎಂದು ತಿಳಿದುಬಂದಿದೆ. ಮಹಮ್ಮದ್‌ ಸಾದಿಕ್‌ ಎಂಬ ಯುವಕ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ನಿಗೂಢ ಸ್ಥಳದಲ್ಲಿ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಈ ನಡುವೆ ಯುವತಿ ಪದೇಪದೆ ಹೇಳಿಕೆ ಬದಲಿಸುತ್ತಿರುವ ಹಿನ್ನೆಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಗ್ರಾಮೀಣ ಠಾಣೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು , ಸದ್ಯ ಯುವತಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಯುವತಿ ಕೊಟ್ಟ ಮಾಹಿತಿ ಆಧಾರದ ಮೇಲೆ ಧಾರವಾಡ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇದನ್ನು ಓದಿ: Bengalore: ಬೆಂಗಳೂರಿನ ಜನತೆಗೆ ಬೊಂಬಾಟ್ ಸುದ್ದಿ – ಆಸ್ತಿ ತೆರಿಗೆ ಬಗ್ಗೆ ಡಿಸಿಎಂ ಕೊಟ್ರು ಸಖತ್ ಗುಡ್ ನ್ಯೂಸ್

You may also like

Leave a Comment