2
Hassan: ಚನ್ನಪಟ್ಟಣದಲ್ಲಿ ಉಪಚುನಾವಣೆ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಹೆಚ್ ಡಿ ಕುಮಾರಸ್ವಾಮಿ ಇಂದು (ಅ.27) ಕುಟುಂಬ ಸಮೇತರಾಗಿ ಹಾಸನಂಬೆ ದರ್ಶನ ಪಡೆಯಲೆಂದು ಹೋಗಿದ್ದು, ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಹಾಸನಾಂಬೆ ದರ್ಶನ ಪಡೆದ ನಂತರ ಸಿದ್ದೇಶ್ವರ ಸ್ವಾಮೀಜಿ ಅವರ ದರ್ಶನ ಪಡೆದಿದ್ದು, ಈ ಸಂದರ್ಭದಲ್ಲಿ ಸಿದ್ದೇಶ್ವರ ಸ್ವಾಮೀಯ ಬಲಭಾಗದಿಂದ ಹೂ ಕಳಗೆ ಬಿದ್ದಿದ್ದು, ಹೂ ಬೀಳುವುದನ್ನು ಅನಿತಾ ಅವರು ಕುಮಾರಸ್ವಾಮಿಗೆ ತೋರಿಸಿದ್ದಾರೆ.
ಪ್ರಾರ್ಥನೆ ಸಂದರ್ಭದಲ್ಲಿ ದೇವರ ಬಲ ಭಾಗದಿಂದ ಹೂವು ಬೀಳುವುದು ಒಳ್ಳೆಯ ಸೂಚನೆಯೆಂದು ಹೇಳಲಾಗುತ್ತದೆ. ಹೀಗಾಗಿ ಕುಮಾರಸ್ವಾಂಇಯವರಿಗೆ ಸಿದ್ದೇಶ್ವರ ಸ್ವಾಮಿ ಶುಭ ಸೂಚನೆ ನೀಡಿದ್ರಾ ಎನ್ನುವ ಕುತೂಹಲ ಹೆಚ್ಚಿದೆ.
