Bidar: ಇತ್ತೀಚಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಪರೀಕ್ಷೆಯಲ್ಲಿ ಜನಿವಾರವ ವಿಷಯವಾಗಿ ವಿವಾದ ಉಂಟಾಗಿ ಅಲ್ಲಿನ ಸಂತ್ರಸ್ತ ವಿದ್ಯಾರ್ಥಿ ಸುಚಿವ್ರತ ಕುಲಕರ್ಣಿ ಇದೀಗ ಟ್ರೋಲ್ ಆಗುತ್ತಿದ್ದಾರೆ. ವಿದ್ಯಾರ್ಥಿ ಕುಲಕರ್ಣಿ ದ್ವಿತೀಯ ಪಿಯುಸಿಯಲ್ಲಿ ಕೇವಲ ಶೇ.56 ಅಂಕವನ್ನು ಗಳಿಸಿದ್ದು, CET ಪರೀಕ್ಷೆಯಲ್ಲಿ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯದಲ್ಲಿ ಪಡೆದಿರುವ ಒಟ್ಟು ಅಂಕಗಳು ಸೇರಿ ಒಟ್ಟು ಇವರು 2 ಲಕ್ಷಕ್ಕೂ ಕಮ್ಮಿ ರಾಂಕ್ ( 2,00,006ನೇ) ಸ್ಥಾನ ಪಡೆದಿರುತ್ತಾರೆ. ತನಗೆ ಕಮ್ಮಿ ಮಾರ್ಕು ಬರುತ್ತೆ ಅಂತ ಗೊತ್ತಿದ್ದೇ ಆತ ಜನಿವಾರ ಖ್ಯಾತೆ ತೆಗೆದಿದ್ದಾನೆ ಅಂತ ‘ನೆಗೆಟಿವ್ ‘ ಅಂಶಗಳನ್ನೇ ಸದಾ ಹುಡುಕಿ ಹುಡುಕಿ ಬರೆದು ಸಂಭ್ರಮಿಸುವ ರಾಜ್ಯಮಟ್ಟದ ವೆಬ್ ಪತ್ರಿಕೆಯೊಂದು ವರದಿ ಪ್ರಕಟಿಸಿದೆ. ಮನುಷ್ಯನಲ್ಲಿ ಸಣ್ಣತನ ಇರಬೇಕು, ಈ ಮಟ್ಟಿಗೆ ಇರಬಾರದು ಅನ್ನೋದನ್ನು ನೆನಪಿಸುವ ಈ ಘಟನೆಯನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಆಸೆ.
ಬೀದರ್ ನಲ್ಲಿ ಪರೀಕ್ಷೆ ಬರೆಯಲು ಹೋದ ಸಮಯದಲ್ಲಿ ಸಿಬ್ಬಂದಿಗಳು ಜನಿವಾರ ತೆಗೆಯಲು ಹೇಳಿದಾಗ ಸುಚಿವೃತ ಕುಲಕರ್ಣಿ ನಿರಾಕರಿಸಿದ್ದ. ಹಾಗಾಗಿ ಆತನಿಗೆ ಒಂದು ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಆತ ಯಾಕೆ ಜನಿವಾರ ತೆಗೆಯಬಾರದು ಅಂತ ಯಾರೂ ಕೇಳುವ ಹಾಗಿಲ್ಲ. ಯಾಕೆಂದರೆ ಅದು ಆತನ ನಂಬಿಕೆ. ಇಲ್ಲಿ ಆತನದು ಏನೂ ತಪ್ಪಿಲ್ಲ. ಅಂಗಿ ತೆಗೆಯಲು ಹೇಳಿದವರು ಪರೀಕ್ಷಾ ಕೋಣೆಯ ಸಿಬ್ಬಂದಿ. ಜನಿವಾರ ತೆಗೆಯುವ ರೂಲ್ಸ್ ಇಲ್ಲದೆ ಇದ್ದರೂ, ಜನಿವಾರ ತೆಗೆಯಲು ಒತ್ತಾಯಿಸಿ ಪರೀಕ್ಷೆ ನಿರಾಕರಿಸಲಾಯಿತು. ನಂತರ ಕುಲಕರ್ಣಿ ಪರೀಕ್ಷೆ ಬರೆಯದೆ ಮನೆಗೆ ಹೋದ. ವಿಷಯವನ್ನು ಮನೆಯವರಿಗೆ ಹೇಳಿದ. ಮಾಧ್ಯಮಕ್ಕೆ ಸುದ್ದಿ ಹೋಯ್ತು. ಅದೊಂದು ರಾಷ್ಟ್ರೀಯ ಮಟ್ಟದ ಸುದ್ದಿಯಾಯಿತು. ಬೇಡದ ಜನೀವಾರಕ್ಕೆ ಕೈ ಹಾಕಿದ ಸಿಬ್ಬಂದಿಗಳಿoದಾಗಿ ಕಾಂಗ್ರೆಸ್ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೆ ಈಡಾಗಿ ಕೊಡುಗೆ ಕ್ಷಮೆ ಕೇಳಬೇಕಾಗಿ ಬಂತು. ವಿದ್ಯಾರ್ಥಿಗೆ ಪರೀಕ್ಷೆ ಬರೆಯದೆ ಇಂಜಿನಿಯರಿಂಗ್ ಸೇರುವ ಅವಕಾಶ ಕೂಡಾ ದೊರೆಯಿತು ಅನ್ನೋದು ಎಲ್ಲರಿಗೂ ತಿಳಿದ ವಿಷಯ.
ಈಗ ಕೆಟ್ಟದ್ದನ್ನೇ ನೋಡಲು ಬಯಸುವ ಮಾಧ್ಯಮವೊಂದು, ಆತ ಕಳಪೆ ಮಾರ್ಕು ಪಡೆಯುವ ಮುನ್ಸೂಚನೆಯಿಂದಾಗಿ ಜನಿವಾರ ವಿವಾದವನ್ನು ತೆಗೆದಿದ್ದಾನೆ. ಹಾಗಂತ ನೆಟ್ಟಿಗರು ಹೇಳುತ್ತಿದ್ದಾರೆ ಎಂದಿದೆ. ಜನಿವಾರವನ್ನು ಚೆಕ್ ಮಾಡಿದ್ದು ಅಲ್ಲಿನ ಸಿಬ್ಬಂದಿ. ಜನಿವಾರವನ್ನು ತೆಗೆಯಲು ಹೇಳಿದ್ದು ಅದೇ ಸಿಬ್ಬಂದಿಯೇ. ವಿವಾದವನ್ನು ಹುಟ್ಟು ಹಾಕಿದ್ದು ಕಾಲೇಜು ಸಿಬ್ಬಂದಿ, ಸುಚಿವೃತ ಕುಲಕರ್ಣಿಯಲ್ಲ. ಮತ್ತೆ ಆತ ಹೇಗೆ ಜನಿವಾರ ವಿವಾದಕ್ಕೆ ಕಾರಣನಾಗುತ್ತಾನೆ. ತನ್ನ ನಂಬಿಕೆಯನ್ನು ವಿನಾಕಾರಣ ಪ್ರಶ್ನಿಸಿದ ಕಾರಣದಿಂದ ಮತ್ತು ತಾನು ಪರೀಕ್ಷೆಯಿಂದ ವoಚಿತನಾದ ಕಾರಣದಿಂದ ಆತ ತನ್ನ ಮನೆಯವರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾನೆ. ಕೌಮಾರ್ಯದ ಹುಡುಗ ಮನೆಯವರಲ್ಲಿ ತನ್ನ ಸಮಸ್ಯೆ ಹೇಳಿಕೊಂಡ ಕಾರಣ ವಿಷಯ ಹೊರಕ್ಕೆ ಬಂತು. ಅದು ತಪ್ಪು ಅಂತ ಹೇಳಲು ಹೇಗೆ ಸಾಧ್ಯ?
ಅಲ್ಲದೆ, ಆತನಿಗೆ 2 ಲಕ್ಷದ ಮೇಲಿನ ರಾಂಕ್ ಬಂದಿದೆ. ಕಡಿಮೆ ಮಾರ್ಕು ಬರುತ್ತೆ ಅಂದುಕೊಂಡೆ ಆತ ಜನಿವಾರ ಜಗಳ ತೆಗೆದಿದ್ದಾನೆ ಅಂದಿದೆ (ನೆಟ್ಟಿಗರು ಟ್ರೊಲ್ ಮಾಡುತ್ತಿದ್ದಾರೆ) ಎಂದು ಹೇಳಿದೆ ಈ ಪತ್ರಿಕೆ. ರಾಂಕು 10 ಲಕ್ಷದಲ್ಲಿ ಬರಲಿ ಅಥವಾ ಮೊದಲನೆಯ ರಾಂಕೇ ಸಿಗಲಿ, ಜನಿವಾರ ತೆಗೆಸಿದ್ದು ಸರಿಯಾ ತಪ್ಪ ಅನ್ನುವುದಷ್ಟೇ ಪ್ರಶ್ನೆ. ಅದೇ ಸಚಿವೃತ ಕುಲಕರ್ಣಿ ತಾನೇ ಜನಿವಾರ ಕಡಿದುಕೊಂಡು, ಕಾಲೇಜು ಸಿಬ್ಬಂದಿ ನನ್ನ ಜನಿವಾರವನ್ನು ತೆಗೆಸಿದರು ಎಂದು ದೂರಿದ್ದರೆ ಆಗ ಕುಲಕರ್ಣಿ ವಿವಾದಕ್ಕೆ ಕಾರಣನಾಗುತ್ತಿದ್ದ. ಶೋಷಣೆಯನ್ನು ವಿರೋಧಿಸಿದ ಕಾರಣಕ್ಕೆ ಮತ್ತು ಆತನಿಗೆ ಈಗ ಕಮ್ಮಿ ರಾಂಕ್ ಬಂದ ಕಾರಣಕ್ಕೆ ಯಾಕೆ ತಾಳೆ ಹಾಕಬೇಕು? ಪಡೆದ ರಾಂಕ್’ಗೂ ಜನಿವಾರ ಜಗಳಕ್ಕೂ ಯಾಕೆ ಲಿಂಕ್ ಮಾಡಬೇಕು? ಕಮ್ಮಿ ರಾಂಕ್ ಬಂದ ತಕ್ಷಣ ಜಗಳ ತೆಗೆದವನು ಆ ಹುಡುಗ ಹೇಗಾಗ್ತಾನೆ? ಜನಿವಾರ ಇಲ್ಲದೆ ಪರೀಕ್ಷೆಗೆ ಬಿಡದವರು ಕಾಲೇಜು ಸಿಬ್ಬಂದಿಯಲ್ಲವೇ?
‘ಸುಚಿವೃತನಿಗೆ ಕಮ್ಮಿ ಅಂಕ ಬಂದ ಕಾರಣಕ್ಕೆ ಆತನನ್ನು ನೋಡುಗರು ಅಪಹಾಸ್ಯ ಮಾಡುವಂತಾಗಿದೆ. ಕುಣಿಯೋಕೆ ಬರೆದವರು ನೆಲ ಡೊಂಕು ಅಂದರಂತೆ, ಜನಿವಾರ ಒಂದು ನೆಪವಾಯ್ತು ಅಷ್ಟೇ ಎಂದು ಕುಲಕರ್ಣಿ ಟ್ರೋಲ್ ಆಗುತ್ತಿದ್ಫು, (ವಿದ್ಯಾರ್ಥಿಯನ್ನು ಕುಗ್ಗಿಸಬೇಡಿ ಎಂದು ಕೆಲವರು ಬುದ್ಧಿ ಮಾತು ಕೂಡ ಹೇಳಿದ್ದಾರೆ ಎಂಬ ಒಂದು ಪಾಸಿಟಿವ್ ಅಂಶ ಕೂಡಾ ಬರೆದಿದೆ ಈ ಪತ್ರಿಕೆ).
ನಮಗೆ ಬ್ರಾಹ್ಮಣ್ಯ, ಜನಿವಾರ ಇಷ್ಟ ಇಲ್ಲದೆ ಹೋದರೆ ಅದು ನಮ್ಮಿಷ್ಟ ಹಾಗಂತ ಯಾರೋ ಜನಿವಾರ ತೆಗೆಸಿದ ತಪ್ಪನ್ನು, ಅಮಾಯಕ ಕೌರ್ಮಾರ್ಯದ ಹುಡುಗನ ತಲೆಗೆ ಕಟ್ಟೋದು ಸಣ್ಣತನದ ವ್ಯಕ್ತಿತ್ವ ಆಗಲ್ವಾ? ಓದುಗರೇ, ನೀವೇ ನಿರ್ಧರಿಸಿ, ರಾಂಕ್ ಕಮ್ಮಿ ಬರುತ್ತೆ ಅಂತ ಸುಚಿವೃತ ಜನಿವಾರ ಕ್ಯಾತೆ ತೆಗೆದನಾ? ನಿಮಗೇನನ್ನಿಸುತ್ತೆ?
