Home » Viral Video : ತರಬೇತುದಾರರನ್ನೇ ತಿಂದು ಮುಗಿಸಿತೇ ಮೀನು? ವೈರಲ್ ವಿಡಿಯೋ ಅಸಲಿಯತ್ತೇನು?

Viral Video : ತರಬೇತುದಾರರನ್ನೇ ತಿಂದು ಮುಗಿಸಿತೇ ಮೀನು? ವೈರಲ್ ವಿಡಿಯೋ ಅಸಲಿಯತ್ತೇನು?

0 comments

Viral Video : ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. 23 ವರ್ಷದ ತರಬೇತುದಾರೆಯನ್ನೇ ಓರ್ಕಾ (Orca) ಮೀನು ಪ್ರದರ್ಶನದ ವೇಳೆಯೇ ತಿಂದು ಮುಗಿಸಿದೆ ಎಂದು ಹೇಳಲಾಗಿರುವ ಜನರ ನಿದ್ದೆಗೆಡಿಸಿದೆ. ಆದರೆ ಇದರ ಅಸಲಿಯತ್ತೇನು? ಇಲ್ಲಿದೆ ನೋಡಿ ಫ್ಯಾಕ್ಟ್ ಚೆಕ್

ಅಂದಹಾಗೆ ಪೆಸಿಫಿಕ್ ಬ್ಲೂ ಮೆರೈನ್ ಪಾರ್ಕ್‌ನಲ್ಲಿ ಸಾಗರ ತರಬೇತುದಾರಿ ಜೆಸ್ಸಿಕಾ ರಾಡ್‌ಕ್ಲಿಫ್ (Jessica Radcliffe) ಅವರನ್ನು ತರಬೇತಿಗೊಂಡಿದ್ದ ಓರ್ಕಾ ಮೀನು ಕೊಂದಿದೆ ಎಂದು ಹೇಳಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ ಓರ್ಕಾ ಮೀನು ಪ್ರದರ್ಶನದ ವೇಳೆಯೇ ತನ್ನ ತರಬೇತುದಾರೆಯನ್ನು ಏಕಾಏಕಿ ಕಚ್ಚಿ, ತರಬೇತುದಾರೆಯ ಮೇಲೆ ಎರಗಿ, ತನ್ನ ಬಾಯೊಳಗೆ ತುಂಬಿ ಪೂಲ್‌ನ ನೀರನ್ನು ಕೂಡಾ ರಕ್ತಸಿಕ್ತವಾಗುವಂತೆ ಮಾಡಿರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

ಅಷ್ಟಕ್ಕೂ ಈ ವಿಡಿಯೋ ಅಸಲಿಯತ್ತೇನೆಂದರೆ ಇಂತಹ ಒಂದು ಘಟನೆಯೇ ನಡೆದಿಲ್ಲ ಎಂಬುದು ಬಹಿರಂಗವಾಗಿದೆ. ಇದೆಲ್ಲವೂ ಕೃತಕ ಬುದ್ಧಿಮತ್ತೆಯ ಮಾಯೆ ಎಂಬುದನ್ನು ಸುದ್ಧಿ ಮಾಧ್ಯಮಗಳು ಜನರಿಗೆ ಮನದಟ್ಟು ಮಾಡಲು ಪ್ರಯತ್ನಿಸುತ್ತಿದೆ. ಇಂತಹ ವಿಡಿಯೋಗಳನ್ನು ಜನರೇಟ್‌ ಮಾಡಿ ವೈರಲ್‌ ಮಾಡಲಾಗಿದ್ದು, ಅದಲ್ಲಿರುವ ಬಹುತೇಕ ಎಲ್ಲಾ ಡೀಟೇಲ್‌ಗಳು ಕೂಡಾ ನೈಜ ಘಟನೆಯಂತೆ ಕಾಣಿಸಿದೆ. ಇಂತಹ ಒಂದು ಘಟನೆ ನಡೆದಿದೆ ಎಂದು ಜನರು ನಂಬಿ ತಲ್ಲಣಗೊಂಡಿದ್ದಾರೆ. ಆದರೆ ಅದೆಲ್ಲವೂ ಸುಳ್ಳು ಎಂದು ಜನರಿಗೆ ತಿಳಿಸಲು ಪ್ರಯತ್ನಿಸಿವೆ.

ಆಶ್ಚರ್ಯವೇನೆಂದರೆ ಜೆಸ್ಸಿಕಾ ರಾಡ್‌ಕ್ಲಿಫ್ ಹೆಸರಿನ ಯಾವುದೇ ಮೀನು ತರಬೇತುದಾರೆ ಅಸ್ತಿತ್ವದಲ್ಲೇ ಇಲ್ಲ. ಮಾತ್ರವಲ್ಲದೇ ಪೆಸಿಫಿಕ್ ಬ್ಲೂ ಮೆರೈನ್ ಪಾರ್ಕ್‌ ಎಂಬ ಸ್ಥಳ ಕೂಡಾ ಎಲ್ಲೂ ಅಸ್ತಿತ್ವದಲ್ಲಿಲ್ಲ. ಇದು ಸಂಶ್ಲೇಷಿತ ವಾಸ್ತವದ ಭಯಾನಕ ಉದಾಹರಣೆಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

You may also like