ಮನುಷ್ಯನಿಗೆ ಮೂಲಭೂತ ಸೌಕರ್ಯ ಪಡೆಯಲು ಹಣ ಇರಬೇಕು, ಹಣ ಬೇಕು ಅಂದರೆ ದುಡಿಯಬೇಕು. ದುಡಿಯಬೇಕು ಅಂದರೆ ನಮ್ಮ ಆರೋಗ್ಯ ಮತ್ತು ದೇಹ ಪಕ್ವವಾಗಿರಬೇಕು. ಆದರೆ ಈ ಎಲ್ಲಾ ಸವಾಲುಗಳನ್ನು ಮೀರಿದಂತ ಕಿವುಡು, ಮೂಕರು ಸೇರಿದಂತೆ ಕೆಲವೊಂದು ನ್ಯೂನ್ಯತೆ ಇರುವವರು
ಎಲ್ಲ ಸಾಮಾನ್ಯ ಮನುಷ್ಯರಿಗಿಂತಲೂ ಹೆಚ್ಚಿನ ಶಕ್ತಿ, ಸಾಮರ್ಥ್ಯದೊಂದಿಗೆ ಸಾಧನೆ ಮಾಡಿರುವುದು ನೋಡಬಹುದು.
ಹೌದು ನಾವು ಕಿವುಡರು , ಮೂಕರು ಅಂದರೆ ತಾತ್ಸಾರದಿಂದ ಕಾಣುತ್ತೇವೆ. ಹಲವಾರು ಬಾರಿ ಇಂಥವರನ್ನು ಕಡೆಗಣಿಸಲಾಗುತ್ತಿದೆ. ಆದರೆ ಪುಣೆಯ ಒಂದು ರೆಸ್ಟೋರೆಂಟ್ ಮಾತ್ರ ಇದೀಗ ಜನರ ಮನಸ್ಸನ್ನು ಗೆದ್ದಿದೆ. ಇದಕ್ಕೆ ಕಾರಣ, ಇಲ್ಲಿಯ ರೆಸ್ಟಾರೆಂಟ್ ನ ಕಿವುಡ ಮತ್ತು ಮೂಕ ಸಿಬ್ಬಂದಿ ಆಗಿರುತ್ತಾರೆ.
ಹೋಟೆಲ್‌ಗೆ ಬರುವ ಅತಿಥಿಗಳನ್ನು ಸಿಬ್ಬಂದಿ ತಮ್ಮದೇ ಸಾಂಕೇತಿಕ ಭಾಷೆಯಲ್ಲಿ ಸ್ವಾಗತಿಸುವುದರೊಂದಿಗೆ, ನಗುಮುಖದ ಈ ಸ್ವಾಗತ ಎಂಥವರ ಮನಸ್ಸಿಗೂ ಹಿತ ನೀಡುತ್ತದೆ.
ಅಲ್ಲದೆ ಅಲ್ಲಿರುವ ಮೆನುವಿನಲ್ಲಿ ಹೋಟೆಲ್‌ನ ಆಹಾರ ಪದಾರ್ಥಗಳನ್ನು ಉಲ್ಲೇಖಿಸಲಾಗಿದ್ದು, ಯಾವ ಆಹಾರ ಬೇಕೆಂದರೆ ಹೇಗೆ ಸಂಕೇತದ ಮೂಲಕ ಸೂಚಿಸಬೇಕು ಎಂಬುದನ್ನು ಗ್ರಾಹಕರಿಗೆ ತಿಳಿಸಲಾಗಿದೆ. ಅದನ್ನು ನೋಡುವ ಗ್ರಾಹಕರು ಹಾಗೆ ಸನ್ನೆ ಮಾಡಿದರೆ, ನಿಮ್ಮ ಆಹಾರ ಕ್ಷಣದಲ್ಲಿ ಟೇಬಲ್ ಮೇಲೆ ಬರುತ್ತದೆ.
ಈ ವೈರಲ್ ವಿಡಿಯೋ ಸಮಾಜದ ಕಣ್ಣು ತೆರೆಸುವಂತಿದ್ದು, ಯಾರಿಗಾದರೂ ಅವಕಾಶ ಕೊಟ್ಟರೆ ಎಂಥ ಕೆಲಸವನ್ನಾದರೂ ನಿರ್ವಹಿಸಬಲ್ಲರು ಎಂಬುದನ್ನು ತೋರಿಸುವಂತಿದೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಮತ್ತು ಇದರಿಂದಾಗಿ ಕೆಲವರಾದರೂ ದುಡಿದು ತಿನ್ನುವ ಅಭ್ಯಾಸ ರೂಢಿಸುವ ಮನೋಭಾವ ಬರಬಹುದು ಎಂದು ಶ್ಲಾಘಿಸಿದ್ದಾರೆ.
